ಆರನೇ ವರ್ಷಕ್ಕೆ ಪಾದಾರ್ಪಣೆಗೈದಸುಳ್ಯದ ರಂಗಮಯೂರಿ ಕಲಾ ಶಾಲೆ

0

ಸಾಂಸ್ಕೃತಿಕ ಲೋಕದ ಹಲವು ಪ್ರಕಾರಗಳ ತರಬೇತಿ ಕೇಂದ್ರ ರಂಗಮಯೂರಿ

ಸುಳ್ಯದ ಶ್ರೀ ರಾಂಪೇಟೆಯ ಶ್ರೀ ಹರಿ ಕಾಂಪ್ಲೆಕ್ಸ್ ನಲ್ಲಿ ಕಳೆದ ಆರು ವರ್ಷಗಳಿಂದ ಸಾಂಸ್ಕೃತಿಕ ಕಲಾ ಪ್ರಕಾರಗಳ ತರಬೇತಿ ಹಾಗೂ ಕಾರ್ಯಕ್ರಮ ನೀಡುವ ಮೂಲಕ ಮನೆ ಮಾತಾಗಿರುವ ರಂಗ ಮಯೂರಿ ಕಲಾ ಶಾಲೆಗೆ ಇದೀಗ ಆರು ವರುಷಗಳು ತುಂಬಿದೆ.

ಕಳೆದ ಆರು ವರ್ಷಗಳಲ್ಲಿ ಹಲವಾರು ಕಲಾ ಪ್ರಕಾರಗಳನ್ನು ನುರಿತ ತರಬೇತುದಾರರಿಂದ ಮಾರ್ಗದರ್ಶನ ತರಬೇತಿ ನೀಡುವ ಮೂಲಕ ಯುವ ಪ್ರತಿಭೆಗಳ ಕಲಾ ಪ್ರತಿಭೆಯನ್ನು ಅನಾವರಣಗೊಳಿಸುವಲ್ಲಿ ತನ್ಮದೇ ಛಾಪು ಮೂಡಿಸಿದೆ.


ರಾಜ್ಯದ ಹಲವಾರು ಕಡೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿ ಜನಮೆಚ್ಚುಗೆ ಗಳಿಸಿರುವುದಲ್ಲದೆ
ರಾಜ್ಯ,ರಾಷ್ಟ್ರ ಮಟ್ಟದಲ್ಲಿ ಗ್ರಾಮೀಣ ಪ್ರತಿಭೆಗಳು ಮಿಂಚುವಂತೆ ಮಾಡಿರುವುದು ಕಲಾ ಶಾಲೆಯ ಮಹತ್ವವಾಗಿದೆ.

ಪ್ರತೀ ವರ್ಷ “ಬಣ್ಣ” ಎಂಬ ಹೆಸರಿನಡಿಯಲ್ಲಿ ಕಾಯರ್ತೋಡಿ ಮಹಾವಿಷ್ಣು ದೇವಸ್ಥಾನದ ವಠಾರದಲ್ಲಿ ಬೇಸಿಗೆ ಶಿಬಿರದ ಆಯೋಜನೆ ಮಾಡುವುದರೊಂದಿಗೆ ಪೋಷಕರ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕಲಾ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳಿಗೆ ತನ್ನದೇ ವೇದಿಕೆಯನ್ನು ನಿರ್ಮಿಸಿಕೊಡುವ ಮೂಲಕ ತಮ್ಮ ಪ್ರತಿಭೆಯನ್ನು ಹೊರಚೆಲ್ಲುವ ಮುಕ್ತ ಅವಕಾಶವನ್ನು ಕಲ್ಪಿಸಿ‌ಕೊಡಲಾಗುತ್ತಿದೆ.

ಮಕ್ಕಳ ಮನಸ್ಸಿನ ಆಸಕ್ತಿ ಗೆ ಅನುಗುಣವಾಗಿ ಮಾರ್ಗದರ್ಶನ ಹಾಗೂ ತರಬೇತಿ ನೀಡುವುದು ಕಲಾ ಶಾಲೆಯ ವಿಶೇಷತೆ.

ರಾಜ್ಯದ ನುರಿತ ಕಲಾಶಿಕ್ಷಕರಿಂದ
ತರಬೇತಿ ಮತ್ತು ಮಾರ್ಗದರ್ಶನದಲ್ಲಿ
ವೆಸ್ಟರ್ನ್ ಡ್ಯಾನ್ಸ್, ಸೆಮಿಕ್ಲಾಸಿಕಲ್ ಡ್ಯಾನ್ಸ್, ಸುಗಮಸಂಗೀತ, ಭಜನೆ,
ಶಾಸ್ತ್ರೀಯಸಂಗೀತ,
ಡ್ರಾಯಿಂಗ್, ಕೀಬೋರ್ಡ್‌ ಹಾಗೂ ಯಕ್ಷಗಾನ, ನಾಟಕ, ಅಭಿನಯ ತರಗತಿಗಳು ನಿರಂತರವಾಗಿ ನಡೆಯುತ್ತಿದೆ.

ಐದು ವರ್ಷಕ್ಕೆ ಮೇಲ್ಪಟ್ಟ ಎಲ್ಲಾವಯೋಮಾನದವರಿಗೆ ಆಸಕ್ತಿಯ ಕಲಾ ಪ್ರಕಾರಗಳ ತರಗತಿಗಳನ್ನು ‌ಹಮ್ಮಿಕೊಳ್ಳಲಾಗುತ್ತಿದೆ.

ರಂಗ ಮಯೂರಿ ಕಲಾ ತಂಡದಿಂದ ಆಕರ್ಷಕ ವಿನೂತನ ಶೈಲಿಯ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಹಾಗೂ ವ್ಯಕ್ತಿತ್ವ ವಿಕಸನ, ಶಿಕ್ಷಣದ ಬೋಧನೆ ಮಾಡಲಾಗುವುದು.


ಉತ್ಸವಾದಿ ಇನ್ನಿತರ ಸಮಾರಂಭಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು,
ನೃತ್ಯ ತಂಡ, ನಾಟಕ ಪ್ರದರ್ಶನ ಕಾರ್ಯಕ್ರಮಗಳನ್ನು ಆಯೋಜಿಸಿಕೊಡಲಾಗುವುದು.
ಸಾಂಸ್ಕೃತಿಕ ಪ್ರದರ್ಶನ ಮತ್ತು ಸ್ಪರ್ಧೆಗಳು ವಾರ್ಷಿಕೋತ್ಸವದ ಸಂದರ್ಭದಲ್ಲಿ ಕಲಾವಿದರಿಗೆ ಬೇಕಾಗಿರುವ
ವೇಷ ಭೂಷಣಗಳು, ಪರಿಕರಗಳು ರಂಗ ಮಯೂರಿಯಲ್ಲಿ ದೊರೆಯುತ್ತದೆ.


ಪ್ರಸ್ತುತ ವರ್ಷದ ತರಗತಿಗಳು ಈಗಾಗಲೇ ಆರಂಭಗೊಂಡಿದ್ದು ದಾಖಲಾತಿ ನೋಂದಾವಣೆ ಗಾಗಿ ಆಸಕ್ತರು ನೇರವಾಗಿ
ಕಲಾ ಶಾಲೆಯನ್ನು ಸಂಪರ್ಕಿಸುವಂತೆ ಕಲಾ ಶಾಲೆಯ ಸಂಚಾಲಕ ಲೋಕೇಶ್ ಊರುಬೈಲು ತಿಳಿಸಿದ್ದಾರೆ.