ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಗೆ ಪ್ಲಾಟಿನಂ ಅವಾರ್ಡ್ ಪ್ರಶಸ್ತಿ

0

ಕಳೆದ 16 ವರ್ಷಗಳಿಂದ ವಿವಿಧ ರೀತಿಯ ಸಮಾಜ ಸೇವೆ ಸಲ್ಲಿಸಿದ ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಗೆ ಪ್ಲಾಟಿನಂ ಅವಾರ್ಡ್ ಪ್ರಶಸ್ತಿ ಲಭಿಸಿದೆ.
ದಕ್ಷಿಣ ವಲಯದ ನಾಲ್ಕು ಜಿಲ್ಲೆಗಳನ್ನು ಒಳಗೊಂಡ ರೋಟರಿ ಸಂಸ್ಥೆಯಲ್ಲಿ ಸುಮಾರು 88 ಕ್ಲಬ್ ಗಳಿದ್ದು ಆ ಕ್ಲಬ್ ಗಳು ಸೇವೆ ಸಲ್ಲಿಸಿದ್ದನ್ನು ಪರಿಗಣಿಸಿ ವರ್ಷಕ್ಕೊಮ್ಮೆ ನೀಡುವ ಪ್ರಶಸ್ತಿಯಲ್ಲಿ ಪ್ಲಾಟಿನಂ ಪ್ರಶಸ್ತಿಯನ್ನು ಅಧ್ಯಕ್ಷ ಬಿ. ಕೆ ಶಶಿಧರ್ ಹಾಗೂ ತಂಡದವರು ಮೈಸೂರಿನಲ್ಲಿ ಸ್ವೀಕರಿಸಿದರು.
ಬೆಳ್ಳಾರೆ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಅನೇಕ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸೇವೆ ಸಲ್ಲಿಸಿರುವುದನ್ನು ಗುರುತಿಸಿ ಈ ಪ್ರಶಸ್ತಿಯನ್ನು ರೋಟರಿ ಜಿಲ್ಲಾ ವಲಯ ಗವರ್ನರ್ ಎಚ್ ಆರ್ ಕೇಶವ್ ನೀಡಿದರು.
ನಮ್ಮ ರೋಟರಿ ಸದಸ್ಯರ ಸಹಕಾರದಿಂದ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸಿದ ಪರಿಣಾಮ ಈ ಪ್ರಶಸ್ತಿ ಲಭಿಸಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಈ ವರ್ಷದ ವ ಲಯ ಸೇನಾನಿಯಾದ ರೋ ಪದ್ಮನಾಭ ಬೀಡು ಐ ಪಿ ಪಿ ರೋ ಕೇಶವಮೂರ್ತಿ, ನಿಯೋಜಿತ ಎ. ಜಿ ರೋ. ವಿನಯಕುಮಾರ್, ನಿಯೋಜಿತ ಅಧ್ಯಕ್ಷರಾದ ರೋ ಚಂದ್ರಶೇಖರ ರೈ, ಪೂರ್ವಾಧಕ್ಷರಾದ ರೋ.ಎ.ಕೆ. ಮಣಿಯಾಣಿ, ರೋ ಪ್ರಭಾಕರ ಆಳ್ವ, ರೋ ಆರೀಫ್, ರೋ ವಿಜಯ ಮಲ್ ಹೊತ್, ರೋ ಹರ್ಷಿತ್, ದಿನೇಶ್ ಅಡ್ಕಾರ್ ಹಾಜರಿದ್ಜರು.