ಮಣಿಕಂಠ ಜಟ್ಟಿಪಳ್ಳ ನಿಧನ

0

ಸುಳ್ಯ ಜಟ್ಟಿಪಳ್ಳದ ಕೆಂಚಪ್ಪ ಭಂಡಾರಿಯವರ ಪುತ್ರ ಮಣಿಕಂಠ ಅಲ್ಪಕಾಲದ ಅಸೌಖ್ಯದಿಂದ ಜೂ.14 ರಂದು ನಿಧನರಾದರು. ಅವರಿಗೆ 45 ವರ್ಷ ವಯಸ್ಸಾಗಿತ್ತು.
ಮಣಿಕಂಠರವರು ಸುಳ್ಯದಲ್ಲಿ ಬಾಳೆಮಕ್ಕಿಯಲ್ಲಿ, ಗಾಂಧಿನಗರದಲ್ಲಿ ಮತ್ತು ಕುಕ್ಕುಜಡ್ಕದಲ್ಲಿ ಕ್ಷೌರಿಕ ವೃತ್ತಿ ಮಾಡುತ್ತಿದ್ದರು. ಉತ್ತಮ ಕ್ರಿಕೆಟ್ ಪಟುವಾಗಿದ್ದ ಮಣಿ ಸುಳ್ಯ ಸುತ್ತಮುತ್ತ ಕ್ರಿಕೆಟ್ ಪಟುವಾಗಿ ಹೆಸರಾಗಿದ್ದರು.
ಕಳೆದ ಕೆಲವರ್ಷದಿಂದ ಅಸೌಖ್ಯದ ಕಾರಣ ಜಟ್ಟಿಪಳ್ಳ ಮನೆಯ ಬಳಿ ಗೂಡಂಗಡಿ ನಡೆಸುತ್ತಿದ್ದರು.
ಮೃತರು ಅವಿವಾಹಿತರಾಗಿದ್ದು ಸಹೋದರರು ಹಾಗೂ ಸಹೋದರಿಯರನ್ನು ಅಗಲಿದ್ದಾರೆ.