ರೋಟರಿ ಸುಳ್ಯ ಸಿಟಿಗೆ ಪ್ಲಾಟಿನಂ ಅವಾರ್ಡ್ ಪ್ರಶಸ್ತಿ

0

ನಾಲ್ಕು ಕಂದಾಯ ಜಿಲ್ಲೆಗಳಾದ ದಕ್ಷಿಣ ಕನ್ನಡ, ಕೊಡಗು, ಮೈಸೂರು ಹಾಗೂ ಚಾಮರಾಜನಗರಗಳನ್ನೊಳಗೊಂಡ ರೋಟರಿ ಜಿಲ್ಲೆ 3181ರ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರೋಟರಿ ಕ್ಲಬ್ ಸುಳ್ಯ ಸಿಟಿಯ ಸಮುದಾಯ ಸೇವೆ, ರೋಟರಿ ಫೌಂಡೇಶನ್‌ಗೆ ದೇಣಿಗೆ, ನೂತನ ರೋಟರ್ಯಾಕ್ಟ್ ಸಂಸ್ಥೆಯ ಪ್ರಾರಂಭ ಮುಂತಾದ ಸಾಧನೆಗಳನ್ನು ಗುರುತಿಸಿ ಪ್ಲಾಟಿನಂ ಅವಾರ್ಡ್ ಪ್ರಶಸ್ತಿ ನೀಡಲಾಯಿತ್ತು.

ಜೂ. 8ರಂದು ಮೈಸೂರಿನಲ್ಲಿ ನಡೆದ ಸಮಾರಂಭದಲ್ಲಿ ರೋಟರಿ ಕ್ಲಬ್ ಸುಳ್ಯ ಸಿಟಿಯ ಅಧ್ಯಕ್ಷ ರೊ| ಗಿರೀಶ್ ನಾರ್ಕೋಡು, ನಿಕಟಪೂರ್ವದ್ಯಕ್ಷ ರೊ| ಮುರಳೀಧರ ರೈ, ನಿಯೋಜಿತ ಅಧ್ಯಕ್ಷ ರೊ| ಶಿವಪ್ರಸಾದ ಕೆ. ವಿ, ಖಜಾಂಜಿ ರೊ| ಹೇಮಂತ ಕಾಮತ್, ಸ್ಥಾಪಕಾದ್ಯಕ್ಷ ರೊ| ಪ್ರಮೋದ್. ಕೆ, ರೊ| ರವಿಕಿರಣ್ ಪಿ. ಎನ್, ರೊ| ಸುಹಾಸ್ ಭಟ್ ರವರ ತಂಡ ಪ್ರಶಸ್ತಿಯನ್ನು ಸ್ವೀಕರಿಸಿದರು.