ಮರ್ಕಂಜ ಹಾಲ್ಟ್ ಬಸ್ ತೇರ್ಥಮಜಲಿಗೆ ಸಂಚಾರ ವಿಸ್ತರಣೆ

0

ಮರ್ಕಂಜದಲ್ಲಿನ ಹಾಲ್ಟ್ ಬಸ್ ತನ್ನ ಸಂಚಾರವನ್ನು ತೇರ್ಥಮಜಲಿಂದ ಆರಂಬಿಸಿರುವುದಾಗಿ ತಿಳಿದು ಬಂದಿದೆ.
ಹಲವು ವರ್ಷಗಳಿಂದ ಮರ್ಕಂಜದಲ್ಲಿ ಹಾಲ್ಟ್ ಆಗುತಿದ್ದ ಬಸ್ ಬೆಳ್ಳಿಗೆ 7.45ಕ್ಕೆ ಮರ್ಕಂಜದಿಂದ ಹೊರಟು ಅರಂತೋಡು – ಸುಳ್ಯಕ್ಕೆ ಸಂಚರಿಸುವ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್ ಸೇವೆಯನ್ನು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಮರ್ಕಂಜದಿಂದ ಹೊರಟು ತೇರ್ಥಮಜಲು ವರೆಗೆ ಹೋಗಿ ಮತ್ತೆ ಮರ್ಕಂಜಕ್ಕೆ ಬಂದು -ಅಡ್ತಲೆ-ಅರಂತೋಡು ಮಾರ್ಗವಾಗಿ ಸುಳ್ಯಕ್ಕೆ ಸಂಚರಿಸಲು ಸಾರಿಗೆ ಇಲಾಖೆಯ ಅಧಿಕಾರಿಗಳು ಸೂಚಿಸಿರುವುದಾಗಿ ತಿಳಿದು ಬಂದಿದೆ. ಇದರಿಂದ ಬಹು ಕಾಲದ ಭೇಡಿಕೆಯೊಂದಕ್ಕೆ ಮನ್ನಣೆ ದೊರೆಯುವಂತಾಗಿದ್ದು ಮೇ.11 ರಿಂದ ತೇರ್ಥಮಜಲಿಗೆ ಸಂಚಾರ ಆರಂಭವಾಗಿದೆ.