ರಾಜಕಾರಣದಿಂದ ನಿವೃತ್ತಿ ಘೋಷಿಸಿದ ಜ್ಯೋತಿ ಪ್ರೇಮಾನಂದ

0

ಜಾತ್ಯತೀತ ಜನತಾ ದಳ ನಾಯಕಿಯಾಗಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದ ಶ್ರೀಮತೆ ಜ್ಯೋತಿ ಪ್ರೇಮಾನದರವರು ರಾಜಕೀಯದಿಂದ ನಿವೃತ್ತಿಯಾಗುವುದಾಗಿ ತಿಳಿಸಿದ್ದಾರೆ.

” ನಾನು ಸುಮಾರು 20 ವರ್ಷಗಳಿಂದ ಜಾತ್ಯತೀತ ಜನತಾ ದಳದ ಕಾರ್ಯಕರ್ತೆ ಹಾಗೂ ವಿವಿಧ ರೀತಿಯ ಹುದ್ದೆಗಳನ್ನು ನಿಭಾಯಿಸಿದ್ದೇನೆ. ಇತ್ತೀಚಿನ ದಿನಗಳಲ್ಲಿ ರಾಜಕಾರಣ ನನ್ನ ನಿಲುವಿಗೆ ವಿರುದ್ಧ ಕಾಣುವ ಕಾರಣ ನಾನು ರಾಜಕಾರಣ ದಿಂದ ನಿವೃತ್ತಿ ಪಡೆಯಲು ನಿರ್ಧರಿಸಿದ್ದೇನೆ ಎಂದು ಅವರು ಸುದ್ದಿಗೆ ತಿಳಿಸಿದ್ದಾರೆ.

ಜ್ಯೋತಿ ಪ್ರೇಮಾನಂದರವರು ಜಾತ್ಯತೀತ ಜನತಾ ದಳ ಸುಳ್ಯ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆಯಾಗಿ ಎರಡು ಬಾರಿ ,
ಸುಳ್ಯ ವಿಧಾನಸಭೆ ಕ್ಷೇತ್ರದ ಉಪಾಧ್ಯಕ್ಷೆ ಯಾಗಿ,
ಜಿಲ್ಲಾ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಯಾಗಿ ,
ಜಿಲ್ಲಾ ಮಹಿಳಾ ಘಟಕದ ಕಾರ್ಯಾಧ್ಯಕ್ಷ ರಾಗಿ ಕಾರ್ಯನಿರ್ವಹಿಸಿದ್ದರು.
ಪ್ರಥಮ ಬಾರಿಗೆ ಸ್ವತಂತ್ರವಾಗಿ ಪಂಚಾಯಿತಿ ಸದಸ್ಯೆ ಆಗಿ ಆಯ್ಕೆ ಯಾಗಿ
ನಂತರ ಜನತಾ ದಳಕ್ಕೆ ಸೇರ್ಪಡೆಗೊಂಡು
ಎರಡು ಬಾರಿ ಪಂಚಾಯತಿ ಸದಸ್ಯೆಯಾಗಿದ್ದರು.