ಉದ್ಯಮಿ ವಿಖ್ಯಾತ್ ರೈ ಅವರಿಂದ ಸೋಣಂಗೇರಿ ಶಾಲೆಗೆ ಹತ್ತು ಸಾವಿರ ಮೌಲ್ಯದ ಪುಸ್ತಕ ವಿತರಣೆ

0

ಸುಳ್ಯದ ವಿಖ್ಯಾತ್ ವೈನ್ ಶಾಪ್ ಮಾಲಕರಾದ ಉದ್ಯಮಿ ವಿಖ್ಯಾತ್ ರೈ ಅವರು ಜಾಲ್ಸೂರು ಗ್ರಾಮದ ಸೋಣಂಗೇರಿ ಸ.ಹಿ.ಪ್ರಾ.ಶಾಲಾ ಮಕ್ಕಳಿಗೆ ರೂ. ಹತ್ತು ಸಾವಿರ ಮೌಲ್ಯದ ಪುಸ್ತಕವನ್ನು ಜೂ.11ರಂದು ವಿತರಿಸಿದರು.

ಈ ಸಂದರ್ಭದಲ್ಲಿ ಉದ್ಯಮಿ ಜಗದೀಶ್ ಸರಳಿಕುಂಜ, ಶಾಲಾ ಎಸ್.ಡಿ.ಎಂ.ಸಿ. ಪದಾಧಿಕಾರಿಗಳು, ಶಾಲಾ ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು. ಸೋಣಂಗೇರಿ ಶಾಲಾ ಸಹಶಿಕ್ಷಕಿ ಶ್ರೀಮತಿ ಸವಿತ ಅವರ ಕೋರಿಕೆಯ ಮೇರೆಗೆ ಪುಸ್ತಕವನ್ನು ಕೊಡುಗೆಯಾಗಿ ನೀಡಲಾಯಿತು.