ಸುಬ್ರಹ್ಮಣ್ಯ: ಕುಲ್ಕುಂದ ಬಳಿ ಕಾರು ಅಪಘಾತ, ವಿದ್ಯುತ್ ಕಂಬ ಮುರಿತ

0

ಸುಬ್ರಹ್ಮಣ್ಯ ಕುಲ್ಕುಂದ ಕಾಲೋನಿ ಬಳಿ ಕಾರೊಂದು ಕರೆಂಟ್ ಕಂಬಕ್ಕೆ ಗುದ್ದಿ ಕರೆಂಟ್ ಕಂಬ ಮುರಿದು ಬಿದ್ದ ಘಟನೆ ಜೂ.16 ರಂದು ನಡೆದಿದೆ.

ಬೆಂಗಳೂರಿನ ಯಾತ್ರಿಕರು ಬಂದ ಕಾರು ಇದಾಗಿದ್ದು ಧರ್ಮಸ್ಥಳ ಕ್ಕೆ ಬಂದು ಸುಬ್ರಹ್ಮಣ್ಯಕ್ಕೆ ಬರುತಿದ್ದರೆನ್ನಲಾಗಿದೆ. ಅತಿ ವೇಗವಾಗಿ ಬಂದ ಕಾರು ಎದುರಿನಿಂದ ಬಂದ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ನಿಂಯತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಕಂಬ ಮುರಿದು ಬಿದ್ದು ವಿದ್ಯುತ್ ಸಂಪರ್ಕ ಕಡಿದು ಹೋಗಿದೆ.