ರವಿಕಕ್ಕೆಪದವು ಟ್ರಸ್ಟ್ ವತಿಯಿಂದ ಕುಮಾರಧಾರ ಸ್ಥಾನಘಟ್ಟ ಸ್ವಚ್ಛತಾ ಕಾರ್ಯ

0

ಕುಕ್ಕೆ ಸುಬ್ರಹ್ಮಣ್ಯ ಕುಮಾರಧಾರ ನದಿ ಸ್ನಾನಘಟ್ಟ ನದಿಯಲ್ಲಿ ಸಾವಿರಾರು ಸಂಖ್ಯೆಯ ಬಟ್ಟೆ ಬರೆಗಳು ನದಿಯಲ್ಲಿ ಬಿದ್ದಿದ್ದು ಇಡೀ ನದಿಯ ನೀರು ಮಲಿನ ಗೊಂಡಿರುವುದಲ್ಲದೆ ಪಕ್ಕದ ಹರಿಯುತ್ತಿರುವ ನದಿಯ ಭಾಗಗಳಲ್ಲಿ ಕೂಡ ವಸ್ತ್ರಗಳು ತೇಲಿಕೊಂಡು ಬಂದು ಇಕ್ಕೆಲಗಳಲ್ಲಿ ಶೇಖರಣೆ ಗೊಂಡಿರುತ್ತದೆ. ಇದನ್ನು ಮನಗಂಡ ರವಿ ಕಕ್ಕೆ ಪದವು ಸಮಾಜ ಸೇವ ಟ್ರಸ್ಟ್ ಹಾಗೂ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಲಿಜನ್ ನ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಸ್ವಚ್ಛತಾ ಕಾರ್ಯಕ್ಕೆ ಜೂ.16 ರಂದು ತೊಡಗಿದರು.

ನದಿಯಲ್ಲಿ ಸ್ನಾನ ಮಾಡುವ ತಳಭಾಗದಲ್ಲಿ ಬಿದ್ದಿದ್ದ ಬಟ್ಟೆಗಳನ್ನ ಮೇಲಕ್ಕೆ ತಂದ ಸ್ವಯಂಸೇವಕರು ಟ್ರ್ಯಾಕ್ಟರ್ ನಲ್ಲಿ ತುಂಬಿಸಿ ಕೊಂಡೊಯ್ದರು. ಬಟ್ಟೆ ಬಿಸಾಡಬಾರದು ಎಂಬ ಮಾಹಿತಿ ಎಷ್ಟೇ ಕೊಟ್ಟರು ಯಾತ್ರಾರ್ಥಿಗಳು ಇದನ್ನು ಕಿವಿಗೆ ಹಾಕಿಸಿಕೊಳ್ಳುತ್ತಿಲ್ಲ. ಈ ನಿಟ್ಟಿನಲ್ಲಿ ಶ್ರೀ ದೇವಳದ ವತಿಯಿಂದ ಕಠಿಣ ಕ್ರಮವನ್ನು ಕೈಗೊಳ್ಳಬೇಕಾದ ಅಗತ್ಯವೂ ಇದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಡೆದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಡಾ. ರವಿ ಕಕ್ಕೆ ಪದವು, ಸೀನಿಯರ್ ಚೇಂಬರ್ ಸ್ಥಾಪಕ ಅಧ್ಯಕ್ಷರಾದ ವಿಶ್ವನಾಥ ನಡುತೋಟ, ಸಮಾಜ ಸೇವಾ ಟ್ರಸ್ಟ್ ನ ಸದಸ್ಯರುಗಳು ಭಾಗವಹಿಸಿದ್ದರು.