ಬೆಳ್ಳಾರೆ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್‌ನಲ್ಲಿ ನೂತನ ಶೈಕ್ಷಣಿಕ ವರ್ಷದ ಪದಗ್ರಹಣ

0

ಜ್ಞಾನ ಗಂಗಾ ಸೆಂಟ್ರಲ್ ಸ್ಕೂಲ್ ಬೆಳ್ಳಾರೆ ಜೂ. ೧೫ ರಂದು ಶೈಕ್ಷಣಿಕ ವರ್ಷದ ನೂತನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನೆರವೇರಿತು.
ಮುಖ್ಯ ಅತಿಥಿಗಳಾಗಿ ರವಿಶಂಕರ್ ಗುರೂಜಿ ಶಾಲೆಯ ಪ್ರಾಂಶುಪಾಲರಾದ ಡಾ.ಸುರೇಶ್ ಮಹಲಿಂಗಪುರ ಆಗಮಿಸಿದ್ದರು.
ದೀಪೋಜ್ವಲನ ಕಾರ್ಯಕ್ರಮವನ್ನು ಶಾಲಾ ಸಂಚಾಲಕರಾದ ಎಂ ಪಿ. ಉಮೇಶ್ , ಪ್ರಾಂಶುಪಾಲರಾದ ಕುಮಾರಿ ದೇಚಮ್ಮ ಟಿ. ಮಾದಪ್ಪ ಹಾಗೂ ಮುಖ್ಯ ಅತಿಥಿಗಳು ನೆರವೇರಿಸಿದ್ದರು.
ಶಾಲಾ ಪ್ರಾಂಶುಪಾಲರು ನೂತನ ಪದಾಧಿಕಾರಿಗಳಿಗೆ ನಾಯಕತ್ವದ ಬಗ್ಗೆ ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ ತಿಳಿಸಿದರು. ನಾಯಕತ್ವ ಎಂಬುದು ಒಂದು ಅಧಿಕಾರವಲ್ಲ ,ಅದು ಅವರು ನಿರ್ವಹಿಸಬೇಕಾದ ಕೆಲಸದ ಹೊಣೆಗಾರಿಕೆಯಾಗಿದೆ. ನಾಯಕತ್ವ ಎಂಬುದು ಒಂದು ಗುರಿ ಅಥವಾ ಅದರ ಕಡೆಗಿನ ಪ್ರಯಾಣವಲ್ಲ . ಅದು ಗುರಿಯನ್ನು ಸೇರುವ ಪ್ರಯಾಣದ ಪ್ರಕ್ರಿಯೆಯಾಗಿದೆ ಎಂದು ಅವರು ತಮ್ಮ ಮಾತುಗಳಲ್ಲಿ ಹೇಳಿದರು.
ನಂತರ ಪದಾಧಿಕಾರಿಗಳಿಗೆ ಬ್ಯಾಡ್ಜ್ ಹಾಗೂ ಧ್ವಜಗಳನ್ನು ನೀಡುವುದರ ಮೂಲಕ ಅಧಿಕೃತ ಹೊಣೆಗಾರಿಕೆಯನ್ನು ಹಂಚಲಾಯಿತು .ಶಾಲಾ ವಿದ್ಯಾರ್ಥಿ ನಾಯಕಿ ಕುಮಾರಿ ವಿಹಾ ನಾಗರಾಜ್ ನೂತನ ಪದಾಧಿಕಾರಿಗಳ ಪರವಾಗಿ ಸ್ವೀಕೃತಿ ಭಾಷಣ ಮಾಡಿದರು .ನಂತರ ಪ್ರಾಂಶುಪಾಲರು ಪ್ರತಿಜ್ಞಾವಿಧಿಯನ್ನು ನೆರವೇರಿಸಿದರು.
ಮುಖ್ಯ ಅತಿಥಿಗಳು ಮಾತನಾಡಿ ನಾಯಕರಿಗೆ ಇರಬೇಕಾದ ಅವಶ್ಯಕ ಗುಣಗಳ ಬಗ್ಗೆ ತಿಳಿಸಿದರು. ಉತ್ತಮ ಸಂವಹನ ,ಸಮಯ ಪರಿಪಾಲನೆ, ಶಿಸ್ತು ಪ್ರೇರಣೆ, ಧನಾತ್ಮಕ ಚಿಂತನೆ, ಸೃಜನಶೀಲತೆ, ಅಭಿಪ್ರಾಯ ಸಂಗ್ರಹಣೆ ಇತ್ಯಾದಿ ಗುಣಗಳನ್ನ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಮಾರ್ಗದರ್ಶಿಸಿದರು ರಾಷ್ಟ್ರಗೀತೆಯೊಂದಿಗೆ ಸಮಾರಂಭ ಸಂಪನ್ನಗೊಂಡಿತು.
ಶಾಲಾ ವಿದ್ಯಾರ್ಥಿನಿ ತ್ರಯೀ ಭಟ್ ಸ್ವಾಗತಿಸಿ, ಅಕ್ಷರ್ .ಕೆ.ವಂದಿಸಿದರು. ಕಾರ್ಯಕ್ರಮವನ್ನು ಶಾಲಾ ವಿದ್ಯಾರ್ಥಿನಿಯರಾದ ಆಪ್ತ ಲಕ್ಷ್ಮಿ ನೆಟ್ಟಾರ್ ಹಾಗೂ ಪ್ರಾಂಜಲಿ. ಎಸ್ .ಆರ್. ನಿರೂಪಿಸಿದರು