ಸಂಪಾಜೆ : ಮದ್ರಸತುಲ್ ಇಸ್ಲಾಹ್ ಪ್ರತಿಭಾ ಪುರಸ್ಕಾರ

0

ಅಲ್ ಇಸ್ಲಾಹ್ ಸಲಫಿ ಜುಮಾ ಮಸೀದಿ ಅಧೀನದಲ್ಲಿ ಕಾರ್ಯಚರಿಸುತ್ತಿರುವ ಮದ್ರಸತುಲ್ ಇಸ್ಲಾಹ್ ಇಲ್ಲಿನ 2013-24 ರ 5ನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ಉನ್ನತ ವಿಜಯ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆ ಕಾರ್ಯಕ್ರಮ ಜೂನ್ 17ರಂದು ಸಂಪಾಜೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಖತೀಬ್ ಉಸ್ತಾದ್ ಶಮೀರ್ ಮೌಲವಿ ಕೊಡಗು, ಮಸೀದಿ ಆಡಳಿತ ಸಮಿತಿ ಅಧ್ಯಕ್ಷರಾದ ಇಬ್ರಾಹಿಂ ಮಾಸ್ಟರ್, ಕಾರ್ಯದರ್ಶಿ ಓವೈಸ್ ಸಂಪಾಜೆ, ಕೋಶಾಧಿಕಾರಿ ಸಿರಾಜ್ ಕರಾವಳಿ, ಸಲಹಾ ಸಮಿತಿ ಸದಸ್ಯರಾದ ಹಮೀದ್ ಎಚ್ ಎ, ಸುಲೈಮಾನ್ ಗೂನಡ್ಕ, ಸಲೀಮ್ ಗೂನಡ್ಕ, ಯೂಸುಫ್ ಕೊಯ್ನಾಡು, ಅಬ್ಬಾಸ್ ಕೊಯ್ನಾಡು, ಶರೀಫ್ ಸಂಪಾಜೆ, ಸೈದು ಚಡಾವು ಹಾಗೂ ಜಮಾಹತ್ ಸದಸ್ಯರುಗಳು ಉಪಸ್ಥಿತರಿದ್ದರು.