ವಿದ್ಯಾಬೋಧಿನೀ ಪ್ರೌಢಶಾಲೆ ಬಾಳಿಲ ವಿದ್ಯಾರ್ಥಿ ಸರಕಾರಕ್ಕೆ ಚುನಾವಣೆ

0

ವಿದ್ಯಾ ಬೋಧಿನೀ ಪ್ರೌಢಶಾಲೆ ಬಾಳಿಲದಲ್ಲಿ ಜೂ. 15ರಂದು ವಿದ್ಯಾರ್ಥಿ ಮುಖಂಡರ ಚುನಾವಣೆ ನಡೆಯಿತು. ಚುನಾವಣೆ ದಿನಾಂಕ ಪ್ರಕಟಿಸುವುದರೊಂದಿಗೆ ಚುನಾವಣೆ ನೀತಿ ಸಂಹಿತೆ ಜಾರಿಯಾಯಿತು. ಮುಂದೆ ಚುನಾವಣಾ ಪ್ರಕ್ರಿಯೆಗಳಾದ ನಾಮಪತ್ರ ಸಲ್ಲಿಕೆ, ನಾಮಪತ್ರ ಹಿಂತೆಗೆತ, ಚಿಹ್ನೆಗಳ ಹಂಚಿಕೆ ನಡೆದಿದ್ದು, ಬಹಿರಂಗ ಪ್ರಚಾರ, ಅಭ್ಯರ್ಥಿಗಳೊಂದಿಗೆ ಮುಖಾಮುಖಿಗೆ ಅವಕಾಶ ಮಾಡಿಕೊಡಲಾಯಿತು.

SPL ಸ್ಥಾನಗಳಿಗೆ ಜಶ್ಮಿ ಎನ್ ಸಿ (10 ಬಿ) ಕ್ಷಮಾ (10 ಎ) ಸ್ಪರ್ಧಿಸಿದ್ದರು.
ASPL ಹುಡುಗರ ಸ್ಥಾನಕ್ಕೆ -ಗಗನ್ ಎನ್ (9 ಎ) ಜಿತೇಶ್ ಎಸ್ ಬಿ (9 ಬಿ )ವಚನ್ ಕೆ (9 ಬಿ ) ನಿತೇಶ್ ಬಿ (8 ಬಿ) ಸ್ಪರ್ಧಿಸಿದ್ದರು.

ASPL ಹುಡುಗಿಯರ ಸ್ಥಾನಕ್ಕೆ ಮನಸ್ಸಿ ಎನ್ (9 ಬಿ ), ಲಿಪಿಕಾ ಸಿ ಯು (8ಬಿ) ಸ್ಪರ್ಧಿಸಿದ್ದರು.

ಮತದಾನದ ದಿನದಂದು ಪೂರ್ವ ಮತಗಟ್ಟೆ ಮತ್ತು ಪಶ್ಚಿಮ ಮತಗಟ್ಟೆ ಎಂದು ಎರಡು ವಿಭಾಗ ಮಾಡಲಾಯಿತು. ಶಿಕ್ಷಕರು ಅಧ್ಯಕ್ಷಾಧಿಕಾರಿ ಮತ್ತು ಚುನಾವಣಾ ಸಿಬ್ಬಂದಿಗಳಾಗಿ ಕರ್ತವ್ಯ ನಿರ್ವಹಿಸಿದರು. ಮತದಾರರನ್ನು ಗುರುತಿಸುವಿಗೆ, ಅಳಿಸಲಾಗದ ಶಾಯಿ ಬಳಕೆ, ಮತಪತ್ರ ನೀಡಿಕೆ ಮುಂತಾದ ಪ್ರಕ್ರಿಯೆಗಳು ಜರುಗಿದವು. ಮತದಾರರು ಮತಪೆಟ್ಟಿಗೆಯಲ್ಲಿ ತಮ್ಮ ಅಮೂಲ್ಯ ಮತಗಳನ್ನು ಹಾಕಿದರು.
ಮುಂದೆ ಎಲ್ಲರ ಸಮ್ಮುಖದಲ್ಲಿ ಮತ ಎಣಿಕೆ ಕಾರ್ಯ ನಡೆಯಿತು. ಐದು ಸುತ್ತಿನ ಎಣಿಕೆಯು ನಡೆದಿತ್ತು. ಪ್ರತಿ ಅಭ್ಯರ್ಥಿ ಗಳಿಸಿದ ಮತಗಳನ್ನು ಕರಿಹಲಗೆಯಲ್ಲಿ ದಾಖಲಿಸಿ ಅಂತಿಮ ಫಲಿತಾಂಶ ಪ್ರಕಟಿಸಲಾಯಿತು.
SPL ಜಶ್ಮಿ ಎನ್ ಸಿ (10 ಬಿ) ASPL (B) -ಜಿತೇಶ್ ಎಸ್ ಬಿ (9 ಬಿ) ASPL (G) -ಮನಸ್ವಿ ಎನ್. (9 ಬಿ )
ಬಹುಮತಗಳಿಂದ ಆಯ್ಕೆಯಾದರು.

ಇದೇ ಸಂದರ್ಭದಲ್ಲಿ ಶಾಲಾ ಸಂಚಾಲಕರಾದ ಪಿ.ಜಿ.ಎಸ್.ಎನ್ ಪ್ರಸಾದ್ ಹಾಜರಿದ್ದು, ವಿಜೇತರಿಗೆ ಶುಭ ಹಾರೈಸಿದರು. ಮುಖ್ಯ ಚುನಾವಣಾಧಿಕಾರಿಯಾಗಿದ್ದ ಮುಖ್ಯೋಪಾಧ್ಯಾಯರಾದಯಶೋಧರ ಎನ್ ಪ್ರಮಾಣ ಪತ್ರ ನೀಡಿ ನೂತನ ನಾಯಕರಿಗೆ ಶುಭವನ್ನು ಹಾರೈಸುತ್ತಾ, ಕರ್ತವ್ಯವನ್ನು ನೆನಪಿಸಿದರು. ಶಿಕ್ಷಕರು ಸಹಕರಿಸಿದರು.