ಚೆಂಬುವಿನ ಊರುಬೈಲು – ನಿಡಿಂಜಿಯಲ್ಲಿ ಅಕ್ವಾನಿಶ್ ಬೆವರೇಜಸ್ ಪ್ರೈ. ಲಿ. ಫ್ಯಾಕ್ಟರಿ ಶೀಘ್ರದಲ್ಲಿ ಶುಭಾರಂಭ

0

ಕಲ್ಲುಗುಂಡಿಯಲ್ಲಿ ಸಂಸ್ಥೆಯ ಕಛೇರಿ ಶುಭಾರಂಭ

ಉದ್ಯಮಿ ಜಯರಾಮ ಚೌಟಾಜೆ ಬೆಂಗಳೂರು, ಸುಬ್ರಹ್ಮಣ್ಯ ಕದಿಕಡ್ಕ ಹಾಗೂ ವಿಜಯ ನಿಡಿಂಜಿ ಪಾಲುದಾರಿಕೆಯಲ್ಲಿ ಅಕ್ವಾನಿಶ್ ಬೆವರೇಜಸ್ ಪ್ರೈ. ಲಿ. ಫ್ಯಾಕ್ಟರಿಯ ನಿರ್ಮಾಣ ಕಾಮಗಾರಿಯು ನಡೆಯುತ್ತಿದ್ದು, ಅತೀ ಶೀಘ್ರದಲ್ಲಿ ಶುಭಾರಂಭಗೊಳ್ಳಲಿದೆ.

ಅಕ್ವಾನಿಶ್ ಬೆವರೇಜಸ್ ಪ್ರೈವೇಟ್ ಲಿಮಿಟೆಡ್ ನ ಕಛೇರಿಯು ದ.ಕ. ಸಂಪಾಜೆ ಗ್ರಾಮದ ಕಲ್ಲುಗುಂಡಿಯ ನಂದಿನಿ ಕಾಂಪ್ಲೆಕ್ಸ್ ನಲ್ಲಿ ಜೂ.12ರಂದು ಶುಭಾರಂಭಗೊಂಡಿದೆ.

ಚೆಂಬು ಗ್ರಾಮದ ಊರುಬೈಲು – ನಿಡಿಂಜಿಯಲ್ಲಿ ಅಕ್ವಾನಿಶ್ ಬೆವರೇಜಸ್ ಪ್ರೈವೆಟ್ ಲಿಮಿಟೆಡ್ ನ ಫ್ಯಾಕ್ಟರಿ ನಿರ್ಮಾಣ ಕಾಮಗಾರಿಯು ಭರದಿಂದ ಸಾಗುತ್ತಿದ್ದು, ಅತೀ ಶೀಘ್ರದಲ್ಲಿ ಶುಭಾರಂಭಗೊಳ್ಳಲಿದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.

ಇಲ್ಲಿ ಮಿನರಲ್ ವಾಟರ್ (ಪ್ಯಾಕೇಜ್ ಡ್ ಡ್ರಿಂಕಿಂಗ್ ವಾಟರ್), ಡಿಸ್ಟಿಲ್ ವಾಟರ್, ಸೋಡಾ, ಜ್ಯೂಸ್ ಸೇರಿದಂತೆ ಇತ್ಯಾದಿ ಉತ್ಪನ್ನಗಳು ಅಕ್ವಾನಿಶ್ ಬೆವರೇಜಸ್ ಪ್ರೈ.ಲಿ. ಕಂಪೆಯನಿಯಲ್ಲಿ ದೊರೆಯಲಿದ್ದು, ಮಂಗಳೂರಿನಿಂದ ಮೈಸೂರಿನವರೆಗೆ ಮಾರ್ಕೆಟಿಂಗ್ ಸೌಲಭ್ಯವಿರುವುದಾಗಿ ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.

ಉದ್ಯಮಿ ಜಯರಾಮ ಚೌಟಾಜೆ ಅವರು ಬೆಂಗಳೂರಿನಲ್ಲಿ ಕಳೆದ 25 ವರ್ಷಗಳಿಂದ ಅಕ್ವ ಸೊಲ್ಯೂಶನ್ ಇಂಜಿನಿಯರ್ ಪ್ರೈ.ಲಿ. ಹಾಗೂ ಮಂಡ್ಯದಲ್ಲಿ ಕಳೆದ ಆರು ವರ್ಷಗಳಿಂದ ಮೌಂಟೇನ್ ಅಕ್ವಾಟೆಕ್ ಇಂಜಿನಿಯರ್ ಕಂಪೆನಿ ನಡೆಸುತ್ತಿದ್ದು, ಪ್ರಸ್ತುತ ಚೆಂಬುವಿನಲ್ಲಿ ಪ್ರಾರಂಭಗೊಳ್ಳಲಿರುವ ಅಕ್ವಾನಿಶ್ ಬೆವರೇಜಸ್ ಪ್ರೈ.ಲಿ. ಕಂಪೆನಿಯ ಪಾಲುದಾರರಾಗಿದ್ದಾರೆ.