ಶರತ್ ಜೋಶಿ ಸ್ಮರಣಾರ್ಥ ಬೆಳ್ಳಾರೆ ಕೆಪಿಎಸ್ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ

0

ಸೈಬರ್ ಕ್ರೈಮ್ ಮತ್ತು ಜೀವನ ಕೌಶಲ್ಯ ಕುರಿತು ಮಾಹಿತಿ ಕಾರ್ಯಗಾರ

ಶ್ರೀ ಸದಾಶಿವ ಚಾರಿಟೇಬಲ್ ಸೊಸೈಟಿ ಬೆಳ್ಳಾರೆ ಇದರ ಆಶ್ರಯದಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್, ಸುಳ್ಯ ಘಟಕ ಇವರ ಸಹಭಾಗಿತ್ವದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ, ಕೌಶಲ್ಯಾಭಿವೃದ್ಧಿ ಮತ್ತು ಸೈಬರ್ ಕ್ರೈಂ ಬಗ್ಗೆ ಮಾಹಿತಿ ಕಾರ್ಯಕ್ರಮ ಇಂದು ಬೆಳ್ಳಾರೆ ಕೆಪಿಎಸ್ ಸಭಾಂಗಣದಲ್ಲಿ ನಡೆಯಿತು.

ಶ್ರೀ ಸದಾಶಿವ ಚಾರಿಟೇಬಲ್ ಸೊಸೈಟಿ ಬೆಳ್ಳಾರೆ ಇದರ ಅಧ್ಯಕ್ಷ ಸುಬ್ರಹ್ಮಣ್ಯ ಜೋಶಿ ಅಧ್ಯಕ್ಷತೆ ವಹಿಸಿದ್ದರು.

ಬೆಳ್ಳಾರೆ ಪೊಲೀಸ್ ಠಾಣೆಯ ಪೂಜಾ ರವರು ಸೈಬರ್ ಕ್ರೈಮ್ ವಿಚಾರವಾಗಿ ಮತ್ತು ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್ ಕೆರೆಯವರು ಜೀವನ ಕೌಶಲ್ಯಾಭಿವೃದ್ಧಿ ವಿಚಾರವಾಗಿ ಉಪನ್ಯಾಸ ನೀಡಿದರು.

” ಚಂಚಲತೆಯ ವಯಸ್ಸಿನಲ್ಲಿ ವಿದ್ಯಾರ್ಥಿಗಳು ಸೈಬರ್ ಕ್ರೈಂ ಗಳ ಕುರಿತು ಎಚ್ಚರಿಕೆ ವಹಿಸಬೇಕು. ಓದಿನೆಡೆಗೆ ಗಮನ ಹರಿಸಬೇಕೇ ವಿನಾ ಸೋಶಿಯಲ್ ಮೀಡಿಯಾಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು ” ಎಂದು ಪೂಜಾ ಹೇಳಿದರು.

“ನಮ್ಮದು ಗೆದ್ದವರ ಜಗತ್ತು ಮಾತ್ರವಲ್ಲ. ಸೋತವರ ಜಗತ್ತು ಕೂಡಾ. ಸೋತಾಗ ದೃತಿಗೆಡದೆ ಎದ್ದು ನಿಲ್ಲುವುದೇ ವಿಜಯ. ಈ ಅನುಭವಗಳೇ ಜೀವನಕ್ಕೆ ಪಾಠವಾಗುತ್ತದೆ” ಎಂದು ದುರ್ಗಾಕುಮಾರ್ ನಾಯರ್ ಕೆರೆ ಹೇಳಿದರು.

ಬೆಳ್ಳಾರೆ ಪೊಲೀಸ್ ಠಾಣೆಯ ಎ. ಎಸ್.ಐ. ದಾಮೋದರ್, ಜರ್ನಲಿಸ್ಟ್ ಯೂನಿಯನ್ ಸುಳ್ಯ ತಾಲೂಕು ಅಧ್ಯಕ್ಷ ಈಶ್ವರ್ ವಾರಣಾಸಿ, ಕೆಪಿಎಸ್ ಪ್ರಾಂಶುಪಾಲ ಜನಾರ್ಧನ ಕೆ.ಎನ್, ಉಪ ಪ್ರಾಂಶುಪಾಲೆ ಶ್ರೀಮತಿ ಉಮಾಕುಮಾರಿ, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕ ಮಾಯಿಲಪ್ಪ ಜಿ., ಕೆಪಿಎಸ್ ಎಸ್.ಡಿ.ಎಂ.ಸಿ ಅಧ್ಯಕ್ಷ ಶ್ರೀನಾಥ್ ರೈ ಬಾಳಿಲ, ಸದಸ್ಯ ಹರ್ಷ ಜೋಗಿಬೆಟ್ಟು,
ಸುಬ್ರಮಣ್ಯ ಜೋಶಿಯವರ ಧರ್ಮಪತ್ನಿ ಶ್ರೀಮತಿ ಶ್ಯಾಮಲಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಉಪನ್ಯಾಸಕ ರಾಮಚಂದ್ರ ಭಟ್ ಕಾರ್ಯಕ್ರಮ ನಿರೂಪಿಸಿದರು.