ಆಸ್ಪತ್ರೆಯಲ್ಲಿ ದಾಖಲಾದ ರೋಗಿಗೆ ಆಸ್ಪತ್ರೆಗೆ ತೆರಳಿ ಆಧಾರ್ ಸೇವೆ ನೀಡಿದ ಅಂಚೆ ಇಲಾಖೆ

0

ಇಲಾಖೆಯ ನಡಿಗೆ ಜನರ ಬಳಿಗೆ ಎಂಬ ಧ್ಯೇಯ ವಾಕ್ಯದಂತೆ ಇಂದು ಅಂಚೆ ಇಲಾಖೆ ರೋಗಿ ಇರುವಲ್ಲಿಗೆ ತೆರಳಿ ಕೆಲಸ ಮಾಡಿಕೊಡುವ ಮೂಲಕ ಸರಕಾರದ ಧ್ಯೇಯೋದ್ದೇಶವನ್ನು ಸಾಕಾರಗೊಳಿಸಿದಂತಾಗಿದೆ. ಇಲಾಖೆಯ ಈ ಕಾರ್ಯಕ್ಕೆ ಶ್ಲಾಘನೆಗೆ ಪಾತ್ರವಾಗಿದೆ.

ಸುಳ್ಯದ ಕೆ.ವಿ.ಜಿ ಆಸ್ಪತ್ರೆಯಲ್ಲಿ ದಾಖಲಾಗಿರುವ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಐವರ್ನಾಡಿನ ಶ್ರೀಮತಿ ಕೆ.ಅನುಪಮಾ ಪೈ ಇವರಿಗೆ ಹೆಚ್ಚಿನ ಚಿಕಿತ್ಸೆಗೆ ಸರಕಾರದಿಂದ ಸಿಗುವ ಸೌಲಭ್ಯದ ಅಗತ್ಯವಿದ್ದು, ಇವರ ಆಧಾರ್ ಕಾರ್ಡ್ ನಲ್ಲಿ ಮೊಬೈಲ್ ಸಂಖ್ಯೆ ಇಲ್ಲವಾದುದರಿಂದ ಅವರಿಗೆ ಸರಕಾರದ ಸೌಲಭ್ಯ ಸಿಗುವುದು ಕಷ್ಟವೆನಿಸಿತು.

ಆಧಾರ್ ಕಾರ್ಡ್ ನಲ್ಲಿ ಮೊಬೈಲ್ ನಂಬರ್ ಇಲ್ಲದಿರುವುದರಿಂದ ಆಗಿರುವ ಸಮಸ್ಯೆಯ ಕುರಿತು ಅನುಪಮಾ ಪೈಯವರ ಮಗ ಮಗ ವಿಕ್ರಮ್ ಪೈಯವರು ನಿವೃತ್ತ ಅಂಚೇಪಾಲಕರಾದ ನಂದರಾಜ್ ಸಂಕೇಶ್ ತಿಳಿಸಿದರು.


ಬಳಿಕ ಅವರಿಬ್ಬರೂ ಸುಳ್ಯದ ಅಂಚೆ ಇಲಾಖೆ ಅಧಿಕಾರಿಗಳಿಗೆ ತಿಳಿಸಿದಾಗ ಇಲಾಖೆಯು ರೋಗಿ ಇರುವಲ್ಲಿಗೇ ಬಂದು ಆಧಾರ್ ಕಾರ್ಡ್ ಸೇವೆ ನೀಡುವುದಾಗಿ ತಿಳಿಸಿದರು.


ಬಳಿಕ ಅಂಚೆ ಇಲಾಖೆಯ ಸಿಬ್ಬಂದಿ ಅಕ್ಷಯ್ ಕುಮಾರ್ ಆಸ್ಪತ್ರೆಗೆ ಆಧಾರ್ ಕಾರ್ಡ್ ತಿದ್ದುಪಡಿಗೆ ಬೇಕಾದ ಯಂತ್ರಗಳ ಸಹಿತ ಹೋಗಿ ಆಧಾರ್ ಗೆ ಮೋಬೈಲ್ ಸಂಖ್ಯೆಯನ್ನು ಅಪ್ಡೇಟ್ ಮಾಡಿ ಕೊಟ್ಟರು.
ಸಾರ್ವಜನಿಕರ ಕೇಳಿಕೆಗೆ ತಕ್ಷಣ ಸ್ಪಂದಿಸಿದ ಅಂಚೆ ಇಲಾಖೆಯ ಸೇವೆಗೆ ಶ್ಲಾಘನೆ ವ್ಯಕ್ತವಾಗಿದೆ.