ಗುತ್ತಿಗಾರು: ಗಂಭೀರ ಗಾಯಗೊಂಡ ಬೀದಿ ನಾಯಿಗೆ ಆರೈಕೆ ಮಾಡಿ ಮಾನವೀಯತೆ ಮೆರೆದರು

0

ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಪೆಟ್ರೋಲ್ ಪಂಪ್ ಆವರಣದಲ್ಲಿ ಸದಾ ವಾಸವಿರುವ ರಾತ್ರಿ ಪೆಟ್ರೋಲ್ ಬಂಕ್ ಬಂದ್ ಆದ ನಂತರ ಯಾರೇ ಬಂಕ್ ಗೆ ಬಂದರೂ ಕೂಡ ಅವರನ್ನು ಗದರಿಸಿ ಕರ್ತವ್ಯ ಪಾಲನೆ ಮಾಡುತ್ತಿದ್ದ ನಾಯಿಯ ಗಾಯಗೊಂಡ ಕಾಲಿಗೆ ಚಿಕಿತ್ಸೆ ನೀಡಿ ಮಾನವೀಯ ಕಾರ್ಯ ಮಾಡಿದ್ದಾರೆ.

ನಾಯಿ ಯಾವುದೊ ವಾಹನದ ಅಡಿಗೆ ಬಿದ್ದು ಕಾಲಿಗೆ ಜಜ್ಜಿದ ಗಾಯ ಗೊಂಡು ನಡೆಯಲು ಕಷ್ಟ ಪಟ್ಟು ರಕ್ತ ಸೋರುತ್ತಿತ್ತು. ಇದನ್ನ ಮನಗಂಡ ಪೆಟ್ರೋಲ್ ಪಂಪ್ ಸಿಬ್ಬಂದಿಗಳು ಆಟೋ ಚಾಲಕ ಚಂದ್ರಶೇಖರ ಕಡೋಡಿ ಅವರ ಸಹಾಯ ಪಡೆದು ನಾಯಿ ಜಜ್ಜಿದ ಕಾಲಿಗೆ ಸೂಕ್ತ ಚಿಕಿತ್ಸೆ ಮಾಡಿದರು. ಸೊಸೈಟಿ ಸಿಬ್ಬಂದಿಗಳಾದ ಕಾರ್ತಿಕ್ ಪೈಕ, ದಿನೇಶ್ ಮೊಟ್ಟೆ ಮನೆ ಮತ್ತು ದೀಕ್ಷಿತ್ ಕುಕ್ಕುಜೆ ಸೇರಿ ಗಾಯಗೊಂಡ ನಾಯಿಗೆ ಸೂಕ್ತ ಚಿಕಿತ್ಸೆ ಮಾಡಿದರು. ನಾಯಿ ಚೇತರಿಸಿಕೊಂಡಿರುವುದಾಗಿ ವರದಿಯಾಗಿದೆ.