ಜು.3: ರೋಟರಿ ಕ್ಲಬ್ ಸುಳ್ಯ ಪದಗ್ರಹಣ

0

ನಿಯೋಜಿತ ಅಧ್ಯಕ್ಷೆಯಾಗಿ ಯೋಗಿತ ಗೋಪಿನಾಥ್

ರೋಟರಿ ಕ್ಲಬ್ ಸುಳ್ಯ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜು.3 ರಂದು ಸುಳ್ಯ ರೋಟರಿ ಕ್ಲಬ್ ನ ಕಮ್ಯೂನಿಟಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಜೂ.26 ರಂದು ಸುಳ್ಯ ಪ್ರೆಸ್ ಕ್ಲಬ್ ನಡೆದ ಪತ್ರಿಕಾಗೋಷ್ಠಿಯಲ್ಲಿ ನಿಯೋಜಿತ ಅಧ್ಯಕ್ಷೆ ಯೋಗಿತ ಗೋಪಿನಾಥ್ ತಿಳಿಸಿದರು.

ರೋಟರಿ ಕ್ಲಬ್ ಸುಳ್ಯ ಇದರ ಮುಂದಿನ ವರ್ಷ ಅಂದರೆ 2024-25 ರ ಸಾಲಿನ ಅಧ್ಯಕ್ಷೆಯಾಗಿ, ಈ ವರ್ಷದ ನೂತನ ತಂಡದೊಂದಿಗೆ, ಸಮಾಜಕ್ಕೆ ಮನಮುಟ್ಟುವ ಮತ್ತು ಸಮಾಜದ ವಿವಿಧ ಸ್ಮರಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಯಸುತ್ತೇನೆ.

ರೋಟರಿ ಅಂತರಾಷ್ಟ್ರೀಯ ಅಧ್ಯಕ್ಷೆ ಸ್ಟೆಫಿನಿ ಎ ಅರ್ಜಿಕ್ ಒರ್ವ ಮಹಿಳೆ ಆದ್ದರಿಂದ ಈವರ್ಷ ಮಹಿಳಾ ಪದಾಧಿಕಾರಿಗಳಿಗೆ ಹೆಚ್ಚಿನ ಮುಂದಾಳತ್ವ ನೀಡಲಾಗಿದೆ.

ಈ ವರ್ಷದ ಅಂತರಾಷ್ಟ್ರೀಯ ರೋಟರಿ ಧೈಯವಾಕ್ಯ ” The Magic Of Rotary” ಎಂಬ ಧೈಯ ವಾಕ್ಯದಡಿಯಲ್ಲಿ ನಮ್ಮ ಡಿಸ್ಟ್ರಿಕ್ಟ್ ಗವರ್ನರ್ ರೋ. ವಿಕ್ರಂ ದತ್ತ ರವರ ನೇತೃತ್ವದಲ್ಲಿ 9 ಡಿಸ್ಟ್ರಿಕ್ ಪ್ರಾಜೆಕ್ಟ್ ನಲ್ಲಿ ಅಂಗನವಾಡಿ ಅಪ್ ಗ್ರೇಡೇಷನ್ ಪ್ರಾಜೆಕ್ಟ್ ಲ್ಲಿ. ಈಗಾಗಲೇ ಕಾರ್ಯಪ್ರವೃತರಾಗಿದ್ದೇವೆ.
ಅಂದರೆ ಪದಗ್ರಹಣ ದಿನದಂದು 2 ಅಂಗನವಾಡಿ ಪ್ರಾಜೆಕ್ಟ್ ಬಿಡುಗಡೆ ಮಾಡುತ್ತೇವೆ.

ಇನ್ನೊಂದು ಡಿಸ್ಟ್ರಿಕ್ಟ್ ಪ್ರಾಜೆಕ್ಟ್ – ಪ್ರಾಜೆಕ್ಟ್ ಪಾಸಿಟಿವ್ ಹೆಲ್ತ್ ನಲ್ಲಿ ಪಾರ್ಶ್ವವಾಯು ಪೀಡಿತ ಮಹಿಳೆಗೆ ಸಹಾಯ ಮಾಡಲು ಇಚ್ಛಿಸುತ್ತೇವೆ.

ರೋಡ್ ಸೇಫ್ಟಿ ಆಂಡ್ ಅವೇರ್ನೆಸ್, ಸ್ಕಿಲ್ ಡೆವಲಪ್ಟೆಂಟ್ ಆಕ್ಟಿವಿಟೀಸ್, ಕ್ಲೀನ್ ಡ್ರಿಂಕಿಂಗ್ ವಾಟರ್ ಅಂಡ್ ವಾಟರ್ ಮ್ಯಾನೇಜೆಂಟ್, ಮೆಂಟಲ್ ಹೆಲ್ತ್ ಇವುಗಳಲ್ಲಿ ಆದಷ್ಟು ವಿದ್ಯಾರ್ಥಿಗಳಿಗೆ ಅವೇರ್ನೆಸ್ ಮೂಡಿಸುವ ಕಾರ್ಯಕ್ರಮಗಳ ಯೋಜನೆ ಇದೆ. ಸಂಧ್ಯಾ ಸುರಕ್ಷಾ ಫಾರ್ ಸೀನಿಯರ್ ಸಿಟಿಜನ್ ಪ್ರಾಜೆಕ್ಟ್ ನಲ್ಲಿ ಮಾನಸಿಕವಾಗಿ ಸಂತಸವನ್ನು ನೀಡುವಂತಹ ವಿಭಿನ್ನ ಕಾರ್ಯಕ್ರಮಗಳ ಯೋಜನೆ ಇದೆ. ಹಾಗೆ ಅಡಿಕ್ಷನ್ ಅಂಡ್ ಡಿ – ಅಡಿಕ್ಷನ್ ನಲ್ಲೂ ಅವೇರ್ನೆಸ್ ಕಾರ್ಯಕ್ರಮಗಳನ್ನ ಯೋಜನ ಇದೆ. ಹಾಗೆ ಅಡಿಕ್ಷನ್ ಅಂಡ್ ಡಿ-ಅಡಿಕ್ಷನ್ ಪ್ರಾಜೆಕ್ಟ್ ನಲ್ಲಿ ಇತ್ತೀಚಿನ ಮಕ್ಕಳಿಗೆ ಟಿವಿ, ಮೊಬೈಲ್, ಡ್ರಗ್ಸ್ ನಂತಹ ಮಾದಕ ದ್ರವ್ಯ, ಧೂಮಪಾನ ಮುಂತಾದ ಕೆಟ್ಟ ಚಟಗಳಿಂದ ದೂರವಿರಿಸಲು ಸಂವಹನದ ಮೂಲಕ ಮುಖ್ಯವಾಹಿನಿಗೆ ತರುವ ಪ್ರಯತ್ನಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.

ರೋಟರಿ ಅಂತರಾಷ್ಟ್ರೀಯ ನಿಧಿಯಿಂದ ಗ್ಲೋಬಲ್ ಗ್ರಾಂಟ್ ಮೂಲಕ ಸುಳ್ಯ ಜನತೆ ಅತಿ ಉಪಯುಕ್ತ ಇರುವ ದೊಡ್ಡ ಪ್ರಾಜೆಕ್ಟ್ ಹಮ್ಮಿಕೊಳ್ಳುವ ಯೋಜನೆ ಇದೆ. ಇಂಟರ್ನ್ಯಾಷನಲ್ ಸರ್ವಿಸ್ ಡೈರೆಕ್ಟರ್ ರೋ. ಸೀತಾರಾಮ ರೈ ಅವರ ನೇತೃತ್ವದಲ್ಲಿ ಗೋಬಲ್ ಗ್ರಾಂಟ್ ಪ್ರಾಜೆಕ್ಟ್ ಛೇರ್ಮನ್ ಆಗಿರುವ ರೋ. ಡಾ. ಕೇಶವ ಪಿ ಕೆ ಯವರು ಕಾರ್ಯಪ್ರವೃತ್ತರಾಗಿದ್ದಾರೆ.

ಕಮ್ಯೂನಿಟಿ ಸರ್ವಿಸ್ ಡೈರೆಕ್ಟರ್ ರೋ. ಸನತ್ ಪೆರಿಯಡ್ಕ ಹಾಗೂ ಡಿಸ್ಟ್ರಿಕ್ಟ್ ಪ್ರಾಜೆಕ್ಟ್ ಛೇರ್ಮನ್ ಆಗಿರುವ ರೋ. ಡಾ. ಪುರುಷೋತ್ತಮ ಕೆ. ಜಿ ಯವರು ಡಿಸ್ಟ್ರಿಕ್ಟ್ ಪ್ರಾಜೆಕ್ಟ್ ನಲ್ಲಿ ಈಗಾಗಲೇ ಕಾರ್ಯಪ್ರವೃತ್ತರಾಗಿದ್ದಾರೆ.

ನಮ್ಮದೇ ವಿದ್ಯಾಸಂಸ್ಥೆಯಾದ ರೋಟರಿ ಸ್ಕೂಲ್ ಮತ್ತು ಕಾಲೇಜು ಈಗಾಗಲೇ ಜನಪ್ರಿಯತೆ ಗೊಂಡಂತಹ ಶಿಕ್ಷಣ ಸಂಸ್ಥೆ. ಈಗಾಗಲೇ 100% ರಿಸಲ್ಟ್ ತಂದುಕೊಟ್ಟಿದೆ. ಮುಂದಿನ ವರ್ಷದಲ್ಲೂ 100% ಫಲಿತಾಂಶಕ್ಕೆ ಹೆಚ್ಚಿನ ಪ್ರಯತ್ನವನ್ನು ಮಾಡುತ್ತೇವೆ.

ಸುಳ್ಯ ರೋಟರಿಗೆ 54 ನೇ ಅಧ್ಯಕ್ಷೆ ಆಗಿ ಎಲ್ಲಾ ಹಿರಿಯ ಸದಸ್ಯರ ಸಲಹೆ ಹಾಗೂ ನಿಕಟಪೂರ್ವ ಅಧ್ಯಕ್ಷರ ಸಹಕಾರದೊಂದಿಗೆ 2024-25 ನೇ ವರ್ಷ ಸುಗಮವಾಗಿ ನಡೆಸುವ ಆಶಯ ಹೊಂದಿರುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ರೋ.ಅನಂದ ಖಂಡಿಗ, ಪ್ರಧಾನ ಕಾರ್ಯದರ್ಶಿ ರೋ.ಹರ್ಷಿತಾ ಪುರುಷೋತ್ತಮ್,ಕೋಶಾಧಿಕಾರಿ ರೋ.ಹರಿರಾಯ ಕಾಮತ್,ಉಪಾಧ್ಯಕ್ಷ ರೋ.ರಾಮ್ ಮೋಹನ್,ರೊ.ಜಿತೇಂದ್ರ ಎನ್ ಎ ಉಪಸ್ಥಿತರಿದ್ದರು.
ಗೋಷ್ಠಿಯಲ್ಲಿ ರೋ.ಜೆಕೆ ರೈ ಸ್ವಾಗತಿಸಿದರು.


ರೋಟರಿ ಕ್ಲಬ್ ಸುಳ್ಯ ದ ನೂತನ ಪದಾಧಿಕಾರಿಗಳು

ರೋಟರಿ ಕ್ಲಬ್ ಸುಳ್ಯದ ಮುಂದಿನ 2024-25 ರ ಸಾಲಿನ ನೂತನ ಅಧ್ಯಕ್ಷೆಯಾಗಿ ರೋ. ಯೋಗಿತ ಗೋಪಿನಾಥ್ , ಕಾರ್ಯದರ್ಶಿಯಾಗಿ ರೋ. ಡಾ. ಹರ್ಷಿತಾ ಪುರುಷೋತ್ತಮ್ , ಖಜಾಂಚಿಯಾಗಿ ರೋ. ಹರಿರಾಯ ಕಾಮತ್ , ಉಪಾಧ್ಯಕ್ಷರಾಗಿ ರೊ. ಡಾ. ರಾಮ್ ಮೋಹನ್ , ಜೊತೆ ಕಾರ್ಯದರ್ಶಿಯಾಗಿ ರೋ. ಆಶಿತಾ ಕೇಶವ್ , ಸಾರ್ಜೆಂಟ್ ಅಟ್ ಆರ್ಮ್ ಆಗಿ ರೋ. ಲತಾ ಮಧುಸೂಧನ್ , ಕ್ಲಬ್ ಲರ್ನಿಂಗ್ ಫೆಸಿಲಿಟೇಟರ್ ಆಗಿ ರೋ. ಗಣೇಶ್ ಭಟ್ ಪಿ. ಯವರು ಆಯ್ಕೆಯಾಗಿರುತ್ತಾರೆ.
ಕ್ಲಬ್ ಎಕ್ಸಿಕ್ಯೂಟಿವ್ ಸೆಕ್ರೆಟರಿ ಆಗಿ ರೋ ಕ್ಲಬ್ ಸರ್ವಿಸ್ ಡೈರೆಕ್ಟರ್ ಆಗಿ ರೋ. ಜಿತೇಂದ್ರ ಎನ್. ಎ , ವೊಕೇಷನಲ್ ಸರ್ವೀಸ್ ಡೈರೆಕ್ಟರ್ ಆಗಿ ರೋ. ಗಿರಿಜಶಂಕರ್ , ಕಮ್ಯೂನಿಟಿ ಸರ್ವಿಸ್ ಡೈರೆಕ್ಟರ್ ಆಗಿ ರೋ. ಸನತ್ ಪೆರಿಯಡ್ಕ , ಇಂಟರ್ನ್ಯಾಷನಲ್ ಸರ್ವೀಸ್ ಡೈರೆಕ್ಟರ್ ಆಗಿ ರೋ. ಸೀತಾರಾಮ ರೈ ಯವರು , ಯೂತ್ ಸರ್ವಿಸ್ ಡೈರೆಕ್ಟರ್ ಆಗಿ ರೋ. ಕಸ್ತೂರಿಶಂಕರ್ ರವರು ಆಯ್ಕೆಯಾಗಿರುತ್ತಾರೆ.
ಮೆಂಬರ್ ಶಿಪ್ ಛೇರ್ಮನ್ ಆಗಿ ರೋ. ಮಧುರ ಜಗದೀಶ್ , ಟಿ. ಆರ್. ಎಫ್ ಛೇರ್ಮನ್ ಆಗಿ ರೋ. ಜಗದೀಶ್ ಅಡ್ತಾಲೆ , ಪಬ್ಲಿಕ್ ಇಮೇಜ್ ಛೇರ್ಮನ್ ಆಗಿ ರೋ. ಜೆ .ಕೆ . ರೈಯವರು , ಸಿ ಎಲ್ ಸಿ ಸಿ ಆಗಿ ರೋ. ಬಾಲಕೃಷ್ಣ ಎಂ. ಆರ್ , WINS ಛೇರ್ಮನ್ ಆಗಿರೋ. ಡಾ. ವೆಂಕಟೇಶ್ , TEACH ಛೇರ್ಮನ್ ಆಗಿ ರೋ. ಚಂದ್ರಶೇಖರ್ ಪೇರಾಲ್ , ಡಿಸ್ಟ್ರಿಕ್ಟ್ ಪ್ರಾಜೆಕ್ಟ್ ಛೇರ್ಮನ್ ಆಗಿ ರೋ. ಡಾ. ಪುರುಷೋತ್ತಮ್ ಕೆ. ಜಿ, ಪಲ್ಸ್ ಪೋಲಿಯೊ ಛೇರ್ಮನ್ ಆಗಿ ರೋ. ಡಾ. ಶ್ರೀಕೃಷ್ಣ ಭಟ್ ಬಿ. ಎನ್ , ವೆಬ್ ಸರ್ವಿಸ್ ಛೇರ್ಮನ್ ಆಗಿ ರೋ. ಸತೀಶ್ ಕೆ. ಜಿ, ರೋಟರಾಕ್ಟ್ ಕ್ಲಬ್ ಸುಳ್ಯ ಛೇರ್ಮನ್ ಆಗಿ ರೋ. ಭಾಗೀಶ್ ಕೆ. ಟಿ , ಆರ್ ಸಿ ಸಿ ಕ್ಲಬ್ ಛೇರ್ಮನ್ ಆಗಿ ರೋ. ಪ್ರಭಾಕರನ್ ಸಿ . ಹೆಚ್ , ಬ್ಲಡ್ ಡೊನೇಷನ್ ಕ್ಯಾಂಪ್ ಛೇರ್ಮನ್ ಆಗಿ ರೋ. ಸಂಜೀವ ಕುದ್ಪಾಜೆ , ಸ್ಪೋರ್ಟ್ಸ್ ಕಮಿಟಿ ಛೇರ್ಮನ್ ಆಗಿ ರೋ. ವಸಂತ್ ಆ. ಸಿ ಯವರು ಆಯ್ಕೆಯಾಗಿರುತ್ತಾರೆ.

ಇಂಟರಾಕ್ಟ್ ಕ್ಲಬ್ ರೋಟರಿ ಸ್ಕೂಲ್ ಸುಳ್ಯ ದ ಛೇರ್ಮನ್ ಆಗಿ ರೋಟರಿ ಸ್ಕೂಲ್ ಕರೆಸ್ಪಾಂಡೆಂಟ್ , ಇಂಟರಾಕ್ಟ್ ಕ್ಲಬ್ ಎಲಿಮಲೆ ಛೇರ್ಮನ್ ಆಗಿ ರೋ. ದಯಾನಂದ್ ಆಳ್ವಾ , ಇಂಟರಾಕ್ಟ್ ಕ್ಲಬ್ ಅರಂತೋಡು ಛೇರ್ಮನ್ ಆಗಿ ರೋ. ಬೆಳ್ಳಿಯಪ್ಪ ಗೌಡ , ಇಂಟರಾಕ್ಟ್ ಕ್ಲೈಬ್ ಕೆವಿಜಿ ಐಪಿಎಸ್ ಸುಳ್ಯ ಛೇರ್ಮನ್ ಆಗಿ ರೋ. ಪ್ರಸನ್ನ ಕಲ್ಲಾಜೆ , ಇಂಟರಾಕ್ಟ್ ಕ್ಲಬ್ ಸವೇರಾಪುರ ಚೈತ್ಮನ್ ಆಗಿ ರೋ. ಮಾಧವ ಬಿ. ಟಿ ಯವರು ಆಯ್ಕೆಯಾಗಿರುತ್ತಾರೆ.

ಹಾಗೆ ಗ್ಲೋಬಲ್ ಗ್ರಾಂಟ್ ಪ್ರಾಜೆಕ್ಟ್ ಛೇರ್ಮನ್ ಆಗಿ ರೋ. ಡಾ . ಕೇಶವ ಪಿ.ಕೆ ಯವರು ಆಯ್ಕೆಯಾಗಿರುತ್ತಾರೆ.