ಜಾಲ್ಸೂರು: ಮುಹಿಯ್ಯದ್ಧೀನ್ ಜುಮ್ಮಾ ಮಸೀದಿಯ ನೂತನ ಪದಾಧಿಕಾರಿಗಳ ಆಯ್ಕೆ

0

ಜಾಲ್ಸೂರಿನ ಮಹಿಯ್ಯದ್ಧೀನ್ ಜುಮ್ಮಾ ಮಸೀದಿಯ 2024 -25ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಇತ್ತೀಚಿಗೆ ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಜಿ.ಪಿ.ಅಬ್ದುಲ್ ಕುಂಞಿ, ಉಪಾಧ್ಯಕ್ಷರಾಗಿ ಹಮೀದ್ ಅಡ್ಕಾರು, ಪ್ರಧಾನ ಕಾರ್ಯದರ್ಶಿಯಾಗಿ ಸಿ.ಪಿ. ರಜಾಕ್ ಕದಿಕಡ್ಕ, ಜೊತೆ ಕಾರ್ಯದರ್ಶಿಗಳಾಗಿ ಜಿ.ಎಸ್. ಅಬ್ದುಲ್ ರಹ್ಮಾನ್, ಕಯ್ಯೂಮ್ ತಯತ್ತ್, ಕೋಶಾಧಿಕಾರಿಯಾಗಿ ಜಿ.ಎಂ. ಹಸನ್ ಆಯ್ಕೆಯಾದರು.

ಸದಸ್ಯರುಗಳಾಗಿ ಎನ್. ಮಹಮ್ಮದ್ ಕುಂಞಿ, ಇಬ್ರಾಹಿಂ ಕದಿಕಡ್ಕ, ಜಿ.ಎಂ. ಉಸ್ಮಾನ್, ಕೆ.ಸಿ. ರಜಾಕ್, ಎಸ್.ಎ. ರಹ್ಮಾನ್, ಅನ್ವರ್ ಪಂಜಿಕಲ್ಲು, ಎ.ಎಂ. ಇಬ್ರಾಹಿಂ, ಲತೀಫ್ ಅಡ್ಕಾರು, ಅಲಿ ಅಡ್ಕಾರು, ಜಿ.ಎಂ. ಹುಸೈನ್, ಉಸ್ಮಾನ್ ಫಾಜ್ ಆಯ್ಕೆಯಾದರು.