ಸುಳ್ಯ ಗ್ಯಾರೇಜ್ ಮಾಲಕರ ಸಂಘದ ವತಿಯಿಂದ ಹೆಚ್.ಎಂ. ನಂದಕುಮಾರ್ ರಿಗೆ ಸನ್ಮಾನ

0

ಸುಳ್ಯ ತಾಲೂಕು ಗ್ಯಾರೇಜ್ ಮಾಲಕರ ಸಂಘದ ವತಿಯಿಂದ ಮಡಿಕೇರಿಯ ಕೆ.ಪಿ.ಸಿ.ಸಿ.ಸದಸ್ಯ ಹೆಚ್.ಎಂ.ನಂದಕುಮಾರ್ ರವರನ್ನು ಜೂ.23 ರಂದು ಮಡಿಕೇರಿಯ ನಿವಾಸದಲ್ಲಿ ಸನ್ಮಾನಿಸಲಾಯಿತು.

ಗ್ಯಾರೇಜ್ ಮಾಲಕರ ಸಂಘದ ಬೆಳ್ಳಿ ಹಬ್ಬದ ಪ್ರಯುಕ್ತ ಪದಾಧಿಕಾರಿಗಳು ಮಡಿಕೇರಿಯಲ್ಲಿರುವ ಹೆಚ್.ಎಂ. ನಂದಕುಮಾರ್ ರವರ ಮನೆಗೆ ತೆರಳಿ ಅಭಿನಂದಿಸಿದರು.


ಈ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷ ಜನಾರ್ಧನ ದೋಳ,‌ ಶಾಂತಪ್ಪ ಡಿ, ಕಾರ್ಯದರ್ಶಿ ಮನೋಹರ ಬೊಳ್ಳೂರು, ಅಣ್ಣಿ ಪೂಜಾರಿ ಬೆಳ್ಳಾರೆ, ಸಚಿನ್ ಮತ್ತಿತರರು ಉಪಸ್ಥಿತರಿದ್ದರು.