ಚಾಮಡ್ಕ ಮತ್ತು ಸೋಣಂಗೇರಿ ಪಾಲ್ಸ್ ವೀಕ್ಷಣೆಗೆ ನಿಷೇಧ

0


ಮಳೆಗಾಲದ ಮಳೆಯ ಕಾರಣದಿಂದಾಗಿ ಅಲ್ಲಲ್ಲಿ ಅನಾಹುತಗಳು ವರದಿಯಾಗುತ್ತಿರುವ ಹಿನ್ನಲೆಯಲ್ಲಿ ಸುಳ್ಯ ತಾಲೂಕಿನ ಚಾಮಡ್ಕ ಜಲಪಾತ ಮತ್ತು ಸೋಣಂಗೇರಿಯ ಜಲಪಾತದ ವೀಕ್ಷಣೆಗೆ ಜನರು ಹೊಳಗೆ ಇಳಿಯದಂತೆ ಜಿಲ್ಲಾಧಿಕಾರಿಗಳು ನಿಷೇಧ ವಿಧಿಸಿದ್ದು, ಸ್ಥಳೀಯ ಗ್ರಾ.ಪಂ. ತಡೆಬೇಲಿ ಕಟ್ಟಿ ಸಾರ್ವಜನಿಕರು ಫಾಲ್ಸ್‌ನತ್ತ ಹೋಗದಂತೆ ಕ್ರಮ ವಹಿಸಿದೆ.


ಇಂದು ಸಂಜೆ ತಹಶೀಲ್ದಾರ್ ಜಿ.ಮಂಜುನಾಥ್, ತಾ.ಪಂ. ಇ.ಒ. ರಾಜಣ್ಣರವರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ದಯಾನಂದ ಪತ್ತುಕುಂಜರೊಂದಿಗೆ ಚಾಮಡ್ಕ ಪಾಲ್ಸ್‌ಗೆ ಹೋಗಿ ತಡೆಬೇಲಿ ಕಟ್ಟಿಸುವ ಕಾರ್ಯ ನಡೆಸಿದರು. ಸಾರ್ವಜನಿಕರಿಗೆ ಸೂಚನೆಗಾಗಿ ಕೆಂಪು ಪಟ್ಟಿಯನ್ನು ಕೂಡಾ ಕಟ್ಟಲಾಗಿದ್ದು, ಪ್ರವೇಶ ನಿಷೇಧದ ಫಲಕವನ್ನು ಹಾಕಲಾಗಿದೆ.


ಈ ನಿಷೇಧವನ್ನು ಉಲ್ಲಂಘಿಸಿ ಯಾರಾದರೂ ಫಾಲ್ಸ್‌ಗೆ ಹೋದುದು ಕಂಡರೆ ದಂಡದ ಜೊತೆಗೆ ಕ್ರಿಮಿನಲ್ ಕೇಸು ದಾಖಲಿಸಲು ನಿರ್ದೇಶನವಿರುವುದಾಗಿ ತಹಶೀಲ್ದಾರ್ ಮತ್ತು ಇ.ಒ.ತಿಳಿಸಿದ್ದಾರೆ.