ಬೆಳ್ಳಾರೆಯಲ್ಲಿ ಗ್ಯಾಸ್ ಹಂಡೆಗೆ ಹತ್ತಿಕೊಂಡ ಬೆಂಕಿ : ತಪ್ಪಿದ ಭಾರೀ ಅನಾಹುತ

0

ಬೆಳ್ಳಾರೆ ಬಸ್ ನಿಲ್ದಾಣ ಸಮೀಪ ಗೂಡಂಗಡಿಯಲ್ಲಿ ಗ್ಯಾಸ್ ಹಂಡೆಗೆ ಬೆಂಕಿ ಹತ್ತಿಕೊಂಡಿದ್ದು ಸಾರ್ವಜನಿಕರ ಸಹಕಾರದೊಂದಿಗೆ ಬೆಂಕಿ ನಂದಿಸಿದ್ದು ಇದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ.
ಗೂಡಂಗಡಿಯಲ್ಲಿ ಗ್ಯಾಸ್ ಉರಿಯುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಗ್ಯಾಸ್ ಪೈಪ್ ನಲ್ಲಿ ಲೀಕೇಜ್ ಉಂಟಾಗಿದ್ದು ಬೆಂಕಿ ಹತ್ತಿ ಉರಿಯತೊಡಗಿತು.
ಕೂಡಲೆ ಅಂಗಡಿಯವರು ಮತ್ತು ಸಾರ್ವಜನಿಕರು ಸೇರಿ ಬೆಂಕಿ ನಂದಿಸಿದರು.
ಇದರಿಂದ ಅನಾಹುತ ತಪ್ಪಿದಂತಾಯಿತೆಂದು ತಿಳಿದು ಬಂದಿದೆ.