ಜಾಲ್ಸೂರು: ಕೆಮನಬಳ್ಳಿ ಜಲಪಾತ ವೀಕ್ಷಣೆಗೆ ತಾತ್ಕಾಲಿಕ ನಿರ್ಬಂಧ

0

ಜಾಲ್ಸೂರು ಗ್ರಾಮದ ಕೆಮನಬಳ್ಳಿಯಲ್ಲಿರುವ ಜಲಪಾತಕ್ಕೆ ವೀಕ್ಷಣೆಗೆ ತಾತ್ಕಾಲಿಕವಾಗಿ ನಿಷೇಧ ಹೇರಲಾಗಿದೆ.


ಇತ್ತೀಚೆಗೆ ಸುರಿಯುತ್ತಿರುವ ಮಳೆಯಿಂದಾಗಿ ಅನಾಹುತ ಅವಘಡ ಸಂಭವಿಸಿದಂತೆ ಮಳೆ ಕಡಿಮೆಯಾಗುವ ತನಕ ಗ್ರಾಮಗಳಲ್ಲಿ ಇರುವ ಫಾಲ್ಸ್ ಗಳಿಗೆ ಸಾರ್ವಜನಿಕರು ಇಳಿಯದಂತೆ ಮುನ್ನೆಚ್ಚರಿಕೆಯ ಕ್ರಮ ಜರುಗಿಸುವ ಸಲುವಾಗಿ ಜಿಲ್ಲಾಧಿಕಾರಿಯವರು ಆದೇಶಿಸಿರುವುದಾಗಿ ತಿಳಿದು ಬಂದಿದೆ.


ಸ್ಥಳಕ್ಕೆ ಸುಳ್ಯ ತಹಶಿಲ್ದಾರ್ ಮಂಜುನಾಥ, ಇ.ಒ ರಾಜಣ್ಣ ಭೇಟಿ ನೀಡಿ ಎಚ್ಚರಿಕೆ ಬ್ಯಾನರ್ ಅಳವಡಿಸಿ ತಡೆಬೇಲಿ ನಿರ್ಮಿಸುವಂತೆ ಪಂಚಾಯತ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.