ಸುಳ್ಯ: ಕೆವಿಜಿ ಐ.ಪಿ.ಎಸ್. ಶೇ. 100 ಫಲಿತಾಂಶ

0

ಸಿ.ಬಿ.ಎಸ್.ಇ 10ನೇ ತರಗತಿ ಪರೀಕ್ಷೆಯಲ್ಲಿ ಸುಳ್ಯದ ಕೆವಿಜಿ ಐಪಿಎಸ್ ಶೇ. 100 ಫಲಿತಾಂಶ ದಾಖಲಿಸಿದೆ. ಪರೀಕ್ಷೆಗೆ ಹಾಜರಾದ 53 ವಿದ್ಯಾರ್ಥಿಗಳಲ್ಲಿ 32 ಮಂದಿ ವಿಶಿಷ್ಟ ಶ್ರೇಣಿಯಲ್ಲಿ, 20 ವಿದ್ಯಾರ್ಥಿಗಳು ಪ್ರಥಮ ದರ್ಜೆ ಮತ್ತು ಓರ್ವ ವಿದ್ಯಾರ್ಥಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಎಲ್ಲಾ ವಿದ್ಯಾರ್ಥಿಗಳಿಗೆ ಶಾಲಾ ಸಂಚಾಲಕರಾದ ಡಾ. ರೇಣುಕಾಪ್ರಸಾದ್ ಕೆ.ವಿ, ಮುಖ್ಯ ಕಾರ್ಯನಿರ್ವಹಣಾಶಿಕಾರಿ ಡಾ. ಉಜ್ಬಲ್ ಯು.ಜೆ, ಪ್ರಾಂಶುಪಾಲರಾದ ಅರುಣ್ ಕುಮಾರ್ ಮತ್ತು ಎಲ್ಲಾ ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.