ಅರಂತೋಡಿನ ವ್ಯಕ್ತಿ ನಾಪತ್ತೆ, ಹುಡುಕಿಕೊಡುವಂತೆ ಮನವಿ

0


ಅರಂತೋಡಿನ ವ್ಯಕ್ತಿಯೊಬ್ಬರು ದಿಢೀರ್ ನಾಪತ್ತೆಯಾಗಿದ್ದು, ಮನೆಯವರು ಹುಡುಕಾಟ ನಡೆಸುತ್ತಿದ್ದಾರೆ. ಅವರನ್ನು ಹುಡುಕಿಕೊಡುವಂತೆ ಮನೆಯವರು ಮನವಿ ಮಾಡಿದ್ದಾರೆ.

ಮರ್ಕಂಜದ ನಿವಾಸಿ, ಅರಂತೋಡಿನಲ್ಲಿ ವಾಸವಾಗಿರುವ 43 ವರ್ಷ ಪ್ರಾಯದ ಕುಸುಮಾಧರ ಮುಂಡೋಡಿ ನಾಪತ್ತೆಯಾಗಿರುವ ವ್ಯಕ್ತಿ. ಎಲ್ಲಾ ಕಡೆ ಇವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಬುಧವಾರ ರಾತ್ರಿಯಿಂದ ಕಾಣೆಯಾಗಿದ್ದಾರೆ ಎಂದು ಹೇಳಲಾಗಿದೆ. ಯಾರಿಗಾದರೂ ಇವರು ಕಂಡು ಬಂದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ತಿಳಿಸಲಾಗಿದೆ.