ಸುಳ್ಯದಲ್ಲಿ ಬಿಜೆಪಿ ವಿಜಯೋತ್ಸವ

0


ಸುಳ್ಯ ಬಿಜೆಪಿ ಭದ್ರಕೋಟೆಯೆಂದು ಮತ್ತೊಮ್ಮೆ ಸಾಬೀತು : ಎ.ವಿ.


ಕಾಂಗ್ರೆಸ್ ಅಪಪ್ರಚಾರಕ್ಕೆ ಸುಳ್ಯದಲ್ಲಿ ಉತ್ತರ :ಎಸ್.ಎನ್.


ಸಮಸ್ಯೆಗಳಿಗೆ ಸ್ಪಂದಿಸಿದ್ದರಿಂದಲೇ ನಿರಂತರ ಗೆಲುವು : ಕಂಜಿಪಿಲಿ

ವಿಧಾನ ಸಭಾ ಚುನಾವಣೆಯಲ್ಲಿ ಸುಳ್ಯ ಕೇತ್ರದ ಬಿಜೆಪಿ ಅಭ್ಯರ್ಥಿ ಕು.ಭಾಗೀರಥಿ ಮುರುಳ್ಯರವರು ಭರ್ಜರಿ ಜಯಗಳಿಸಿದ ಹಿನ್ನಲೆಯಲ್ಲಿ ಸುಳ್ಯದಲ್ಲಿ ಬಿಜೆಪಿ ವಿಜಯೋತ್ಸವ ಆಚರಿಸಿತು.


ಬಿಜೆಪಿ ಕಚೇರಿ ಎದುರು ನಡೆದ ವಿಜಯೋತ್ಸವದಲ್ಲಿ ಮಾತನಾಡಿದ ಮೀನುಗಾರಿಕಾ ನಿಗಮಾಧ್ಯಕ್ಷ ಎ.ವಿ.ತೀರ್ಥರಾಮರವರು ಸುಳ್ಯ ಬಿಜೆಪಿಯ ಭದ್ರಕೋಟೆಯೆಂದು ಸುಳ್ಯದ ಮತದಾರರು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಕಳೆದ ಬಾರಿಯ ಅಂತರದಿಂದ 5 ಸಾವಿರ ಹೆಚ್ಚು ಅಂತರದಿಂದ ಭಾಗೀರಥಿ ಮುರುಳ್ಯ ಗೆದ್ದಿದ್ದಾರೆ. ಇಲ್ಲಿ ಜನರಿಗೆ ನ್ಯಾಯ ಒದಗಿಸುವ ರೀತಿಯಲ್ಲಿ ನಾವು ಕೆಲಸ ಮಾಡಲಿzವೆ ಎಂದು ಹೇಳಿದರು. ಬಿಜೆಪಿಯ ಹಿರಿಯ ಮುಖಂಡ ಎಸ್.ಎನ್.ಮನ್ಮಥ ಮಾತನಾಡಿನಮ್ಮ ಆಭ್ಯರ್ಥಿ ಭಾಗೀರಥಿ ಮುರುಳ್ಯರವರು 3೦ ಸಾವಿರ ಮತಗಳ ಅಂತರದಿಂದ ಗೆದ್ದಿದ್ದಾರೆ. ಇದು ಕಾರ್ಯಕರ್ತರ ಗೆಲುವು. ಕಾಂಗ್ರೆಸ್ ಚುನಾವಣೆ ಸಂದರ್ಭ ಪ್ರಚಾರ ಮಾಡಿ ಭಾಗೀರಥಿಯವರು ಸ್ವಾಭಿಮಾನಿಗಳ ಅಭ್ಯರ್ಥಿ ಎಂದು ಹೇಳಿಕೊಂಡು ಹೋಗುತ್ತಿದ್ದರು. ಆದರೆ ಈ ಚುನಾವಣೆಯ ಮೂಲಕ ಅವರಿಗೆ ಮತದಾರ ಉತ್ತರ ನೀಡಿದ್ದಾನೆ. ಚುನಾವಣೆ ಸಂದರ್ಭ ನೀಡಿದ ಭರವಸೆ ಈಡೇರಿಕೆಗೆ ಭಾಗೀರಥಿಯವರ ಜತೆಗೆ ನಿಂತು ನಾವು ಕೆಲಸ ಮಾಡುತ್ತೇವೆ ಎಂದು ಹೇಳಿದರು.


ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಮಾತನಾಡಿ ೧೯೯೪ರ ನಂತರ ಬಿಜೆಪಿಯನ್ನು ಸುಳ್ಯದಲ್ಲಿ ಜನರು ಬಿಟ್ಟು ಕೊಡಲಿಲ್ಲ. ಸುಮ್ಮನೆ ಇಲ್ಲಿ ಜನರು ಬಿಜೆಪಿಯನ್ನು ಗೆಲ್ಲಿಸಿಲ್ಲ. ಇಲ್ಲಿಯ ಸಮಸ್ಯೆಗಳಿಗೆ ಸಮರ್ಥವಾಗಿ ಸ್ಪಂದಿಸಿದ ಮೇರೆಗೆ ಜನರು ಬಿಜೆಪಿಯನ್ನು ನಮ್ಮನ್ನು ಬೆಂಬಲಿಸಿದ್ದಾರೆ. ಜನರ ಸಮಸ್ಯೆಯನ್ನು ನಿವಾರಿಸಲು ನಾವು ವಿಶೇಷ ಪ್ರಯತ್ನ ಮಾಡುತ್ತೇವೆ” ಎಂದು ಹೇಳಿದರು.


ಪ್ರಮುಖರಾದ ಎನ್.ಎ.ರಾಮಚಂದ್ರ, ಸಂತೋಷ್ ಕುತ್ತಮೊಟ್ಟೆ, ಕರುಣಾಕರ ಹಾಸ್ಪಾರೆ, ಹರೀಶ್ ರೈ ಉಬರಡ್ಕ, ಸುಧಾಕರ ಕುರುಂಜಿಭಾಗ್, ಶೀಲಾ ಕುರುಂಜಿ, ಕಿಶೋರಿ ಶೇಟ್, ಶಶಿಕಲ ನೀರಬಿದಿರೆ, ಚನಿಯ ಕಲ್ತಡ್ಕ, ಜಗದೀಶ ಸರಳಿಕುಂಜ, ಸುಪ್ರಿತ್ ಮೋಂಟಡ್ಕ, ಅಶೋಕ್ ಅಡ್ಕಾರು, ಜಿನ್ನಪ್ಪ ಪೂಜಾರಿ, ಗುರುಸ್ವಾಮಿ, ವಿಜಯ ಆಲಡ್ಕ, ಶಾಂತರಾಮ ಕಣಿಲೆಗುಂಡಿ, ಶಂಕರ ಪೆರಾಜೆ, ಶೀನಪ್ಪ ಬಯಂಬು, ಆನಂದ ಕಾಂತಮಂಗಲ, ಬಾಲಕೃಷ್ಣ ಕೀಲಾಡಿ, ಚಂದ್ರಶೇಖರ ನೆಡಿಲ್ ಮೊದಲಾದವರಿದ್ದರು.