ಜಾಲ್ಸೂರು: ಸೋಶಿಯಲ್ ಫೋರಮ್ ವತಿಯಿಂದ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

0


ಜಾಲ್ಸೂರಿನ ಸೋಶಿಯಲ್ ಫೋರಮ್ ವತಿಯಿಂದ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ , ಶೈಕ್ಷಣಿಕ ಮಾರ್ಗದರ್ಶನ ಶಿಬಿರವು ಹಯಾತುಲ್ ಇಸ್ಲಾಂ ಮದ್ರಸದ ಸಭಾಂಗಣದಲ್ಲಿ ಮೇ.28ರಂದು ಜರುಗಿತು.
ರಫೀಕ್ ಮಾಸ್ಟರ್ ಮಂಗಳೂರು ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಮಾರ್ಗದರ್ಶನ ನೀಡಿದರು.


ಈ ಸಂದರ್ಭದಲ್ಲಿ ಜುಮಾ ಮಸೀದಿಯ ಉಸ್ತಾದ್ ಅಬ್ದುಲ್ ಅಝೀಜ್ ಬಾಖವಿ, ಸ್ಥಳೀಯರಾದ ಎನ್. ಇ. ಮಹಮ್ಮದ್ ಕುಂಞಿ ಅಡ್ಕಾರು, ಅಬ್ಬಾಸ್ ಪೈಜಿ, ಅಬೂಬಕ್ಕರ್ ಅಡ್ಕಾರು, ಎನ್.ಕೆ. ನಜೀಬ್ , ಹಸನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.