ಜೂ.17 ರಂದು ಶಾಸಕಿ‌ ಭಾಗೀರಥಿ ಮುರುಳ್ಯರಿಗೆ ಸುಳ್ಯ ಯುವಜನ ಸಂಯುಕ್ತ ಮಂಡಳಿ ಸನ್ಮಾನ

0

ಸುಳ್ಯ ಯುವಜನ ಸಂಯುಕ್ತ ಮಂಡಳಿ ಮಾಜಿ ಅಧ್ಯಕ್ಷೆ, ಇದೀಗ ಶಾಸಕರಾಗಿರುವ ಕು.ಭಾಗೀರಥಿ ಮುರುಳ್ಯ ರಿಗೆ‌ ಯುವಜನ ಸಂಯುಕ್ತ ಮಂಡಳಿ ಹಾಗೂ ಯುವಜನ ಸೇವಾ ಸಂಸ್ಥೆಯಿಂದ ವತಿಯಿಂದ ಸನ್ಮಾನ ಸಮಾರಂಭ ಜೂ.17 ರಂದು ಮಂಡಳಿ ಸಭಾಂಗಣದಲ್ಲಿ ನಡೆಯಲಿದೆ.

ಮಂಡಳಿ ಪೂರ್ವಾಧ್ಯಕ್ಷ ಎನ್.ಜಯಪ್ರಕಾಶ್ ರೈ ಅಧ್ಯಕ್ಷತೆ‌ ವಹಿಸಲಿದ್ದು, ಮಂಡಳಿ ಸ್ಥಾಪಕ ಗೌರವ ಕಾರ್ಯದರ್ಶಿ ಶ್ರೀಮತಿ ಮೀನಾಕ್ಷಿ ಗೌಡ ಸನ್ಮಾನ ನೆರವೇರಿಸುವರು.
ಮಂಡಳಿ ಪೂರ್ವಾಧ್ಯಕ್ಷ ಎಂ.ಬಿ.ಸದಾಶಿವ ಅಭಿನಂದನಾ‌ ಭಾಷಣ ಮಾಡಲಿದ್ದಾರೆ ಎಂದು ಅಧ್ಯಕ್ಷ ತೇಜಸ್ವಿ ಕಡಪಳ ತಿಳಿಸಿದ್ದಾರೆ.