ಚೆಂಬು : ಆನ್ಯಾಲ ಟೈಗರ್ಸ್ ಕ್ರಿಕೆಟ್ ಪಂದ್ಯಾಟ

0

ಚೆಂಬು ಗ್ರಾಮದ ಆನ್ಯಾಲ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ಅನ್ಯಾಲ ಟೈಗರ್ಸ್ ಕ್ರಿಕೆಟ್ ಪಂದ್ಯಾಟವು ಜೂ.11ರಂದು ಜರುಗಿತು.

ಪಂದ್ಯಾಟವನ್ನು ಕೇಪು ಮತ್ತು ಕೆ. ಬಿ. ಚಂದಪ್ಪ ಅವರು ಜಂಟಿಯಾಗಿ ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿದರು.
ಒಟ್ಟು ಮೂರು ತಂಡಗಳು ಭಾಗವಹಿಸಿದ್ದ ಕ್ರಿಕೆಟ್ ಪಂದ್ಯಾಟದಲ್ಲಿ ಗಗನ್ ಮತ್ತು ತಂಡದವರು ಪ್ರಥಮ ಬಹುಮಾನ ಪಡೆದಿದ್ದು, ದ್ವಿತೀಯ ಬಹುಮಾನವನ್ನು ಗೌತಮ್ ಮತ್ತು ತಂಡದವರು ಪಡೆದುಕೊಂಡರು.


ವಿಜಯ ಹಾಗೂ ದಿನೇಶ್ ಅವರು ತೀರ್ಪುಗಾರರುಗಳಾಗಿ ಸಹಕರಿಸಿದರು.
ಕ್ರಿಕೆಟ್ ಪಂದ್ಯಾಟಕ್ಕೆ ಕಾಲನಿಯ ಪೋಷಕರು ಧನಸಹಾಯ ಮಾಡಿ ಸಹಕರಿಸಿದರು. ಗಗನ್ ಅವರು ಸ್ವಾಗತಿಸಿ, ಗೌತಮ್ ಬಿ.ಜಿ. ವಂದಿಸಿದರು.