ಮಂಡೆಕೋಲು ಪೆರಾಜ : ಯುವತಿ ನೇಣು ಬಿಗಿದು ಆತ್ಮಹತ್ಯೆ

0

ಮಂಡೆಕೋಲು ಗ್ರಾಮದ ಪೆರಾಜ‌ ದೇವಪ್ಪ ನಾಯ್ಕರ ಪುತ್ರಿ ಯಶ್ವಿನಿ (23) ನೇಣು ಬಿಗಿದು‌ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.

ಬೆಳಗ್ಗೆ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಈ ಕೃತ್ಯ ಎಸಗಿದ್ದು, ಹುಲ್ಲು ತರಲು ಹೋಗಿದ್ದ ತಾಯಿ‌ ಮನೆಗೆ ಬಂದಾಗ ನೇಣು‌ ಬಿಗಿದಿರುವುದು ಗೊತ್ತಾಗಿದೆ.

ಪೋಲೀಸರು ಸ್ಥಳಕ್ಕೆ ಬಂದು‌ ಮಹಜರು‌ ನಡೆಸಿದ್ದಾರೆ.

ಯಶ್ವಿನಿ ಕೆಲ ಸಮಯದಿಂದ ಖಿನ್ನತೆಯಿಂದ ಬಳಲುತ್ತಿದ್ದರೆಂದೂ ಅದಕ್ಕೆ ಚಿಕಿತ್ಸೆ ಪಡೆಯುತ್ತಿದ್ದರೆಂದು ತಿಳಿದುಬಂದಿದೆ.