ಸರ್ಕಾರಿ ಪದವಿಪೂರ್ವ ಕಾಲೇಜು ಸುಳ್ಯ: ವಿದ್ಯಾರ್ಥಿ ಸಂಘದ ಚುನಾವಣೆ

0


2023-24ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಸಂಘದ ನಾಯಕ ಮತ್ತು ಉಪನಾಯಕ ಸ್ಥಾನಗಳಿಗೆ ಜೂನ್ 17ರಂದು ಚುನಾವಣೆ ನಡೆಸಲಾಯಿತು. ಚುನಾವಣಾ ಕಣದಲ್ಲಿ ಅಭ್ಯರ್ಥಿಗಳಾಗಿ ದ್ವಿತೀಯ ಪಿಯುಸಿ ಕಲಾ ವಿಭಾಗದಿಂದ ಅನನ್ಯ ಜಿ , ಹರಿಪ್ರಸಾದ್ , ನಿತೇಶ್ ಬಿ ಕೆ , ಪುನೀತ್ ಎನ್ ಹೆಚ್ ಮತ್ತು ಸರ್ವೇಶ್ ವಾಣಿಜ್ಯ ವಿಭಾಗದಿಂದ ಶಮಂತ್ ಎಂ ಪಿ ಮತ್ತು ಸೂರ್ಯ , ವಿಜ್ಞಾನ ವಿಭಾಗದಿಂದ ಪೃಥ್ವಿ ಕೆ ಬಿ ಸ್ಪರ್ಧಿಸಿದರು.


ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಸೂರ್ಯ ಅತಿ ಹೆಚ್ಚು ಮತ ಗಳಿಸಿ ನಾಯಕನಾಗಿ ಹಾಗೂ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಪೃಥ್ವಿ ಕೆ ಬಿ ಉಪನಾಯಕನಾಗಿ ಆಯ್ಕೆಗೊಂಡರು.


ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಮೋಹನ ಗೌಡ ಬೊಮ್ಮೆಟ್ಟಿ ಚುನಾವಣಾ ಫಲಿತಾಂಶ ಘೋಷಿಸಿ, ನಾಯಕ ಮತ್ತು ಉಪ ನಾಯಕರಾಗಿ ಆಯ್ಕೆಗೊಂಡ ಅಭ್ಯರ್ಥಿಗಳನ್ನು ಅಭಿನಂದಿಸಿದರು.


ಸಂಸ್ಥೆಯ ಸಮಾಜಶಾಸ್ತ್ರ ಉಪನ್ಯಾಸಕರಾದ ಶಿವರಾಮ ನಾಯ್ಕ ಕೆ, ಮುಖ್ಯ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಎಲ್ಲಾ ಉಪನ್ಯಾಸಕರ ಸಹಕಾರದೊಂದಿಗೆ EVM ಬಳಸಿ ಚುನಾವಣೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಲಾಯಿತು.