ಪಂಜ ಲಯನ್ಸ್ ಕ್ಲಬ್ ಪದಗ್ರಹಣ ಸಮಾರಂಭದ ಆಮಂತ್ರಣ ಬಿಡುಗಡೆ

0

ಲಯನ್ಸ್ ಕ್ಲಬ್ ಪಂಜ ಇದರ ಪದಗ್ರಹಣ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಲl ಎಂ.ಜೆ.ಎಫ್.ಮಾಧವ ಗೌಡ ಜಾಕೆ ಬಿಡುಗಡೆಗೊಳಿಸಿದರು. ಜೂ.24 ರಂದು ಶನಿವಾರ ಸಂಜೆ ಗಂಟೆ 7.30ಕ್ಕೆ ನಡ್ಕ ಶಿವ ಗೌರಿ ಕಲಾಮಂದಿರ ಪಡ್ಪಿನಂಗಡಿಯಲ್ಲಿ ಪದಗ್ರಹಣ ಸಮಾರಂಭ ನಡೆಯಲಿದೆ.


ಪದಗ್ರಹಣ ಅಧಿಕಾರಿಯಾಗಿ ಪ್ರಥಮ ಉಪ ಜಿಲ್ಲಾ ರಾಜ್ಯಪಾಲರಾದ ಬಿ.ಎಂ ಭಾರತಿಯವರು ಭಾಗವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ದಿನೇಶ್ ಮಡಪ್ಪಾಡಿ ಭಾಗವಹಿಸಲಿದ್ದಾರೆ.


ಈ ಸಂದರ್ಭದಲ್ಲಿ ಅಧ್ಯಕ್ಷರಾದ ಪುರುಷೋತ್ತಮ ದಂಬೆಕೋಡಿ, ಕಾರ್ಯದರ್ಶಿ ನಾಗೇಶ್ , ನಿಯೋಜಿತ ಅಧ್ಯಕ್ಷ ದಿಲೀಪ್ ಬಾಬ್ಲು ಬೆಟ್ಟು.ವಾಸುದೇವ ಮೇಲ್ಪಾಡಿ, ಆನಂದ ಗೌಡ ಹಾಗು ಎಲ್ಲಾ ಸದಸ್ಯರು, ಪೂರ್ವಾದ್ಯಕ್ಷರುಗಳು, ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.