ಮನೆಯವರ ಉಪಟಳದಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದ ವೃದ್ಧ ಸೈನಿಕ

0

ರವಿ ಕಕ್ಕೆಪದವು ಸೇವಾ ಟ್ರಸ್ಟ್ ಮತ್ತು ಸುಬ್ರಹ್ಮಣ್ಯ ಪೊಲೀಸರಿಂದ ಮನೆಯವರ ಕರೆಸಿ ಹಸ್ತಾಂತರ

ಮನೆಯವರ ಉಪಟಳ ಇರುವುದಾಗಿ ಆರೋಪಿಸಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದ ವೃದ್ದ ನನ್ನು ರವಿ ಕಕ್ಕೆಪದವು ಸೇವಾ ಟ್ರಸ್ಟ್ ನವರು ಮತ್ತು ಸುಬ್ರಹ್ಮಣ್ಯ ಪೊಲೀಸರು ಸೇರಿ ಮನೆಯವರನ್ನು ಕರೆಸಿ ಮನೆಯವರಿಗೆ ಹಸ್ತಾಂತರಿಸಿದ ಘಟನೆ ಜೂ.೨೦ ರಂದು ವರದಿಯಾಗಿದೆ.

ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ವೃದ್ಧರೋರ್ವರು ತಿರುಗಾಡುತ್ತಿದ್ದದನ್ನು ಗಮನಿಸಿದ ಸೇವಾ ಟ್ರಸ್ಟ್ ಮತ್ತು ಪೊಲೀಸರ ಸಹಾಯದಿಂದ ವಿಚಾರಿಸಿದಾಗ ಅವರು ತಾನು ಬೆಂಗಳೂರಿನ ಕತ್ರಿಗುಪ್ಪೆ ನಿವಾಸಿ ಭಕ್ತವತ್ಸಲ ನನ್ನ ಹೆಸರು. ೮೧ ವರ್ಷ ಪ್ರಾಯ ತಾನು ಭಾರತೀಯ ಸೇನೆಯಲ್ಲಿ ಮೂರು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದೆ ಮನೆಯವರಿಗಾಗಿ ಕೆಲಸವನ್ನು ಬಿಟ್ಟ ಬಳಿಕ, ಅನೇಕ ಕಂಪೆನಿಗಳಲ್ಲಿ ದುಡಿದಿದ್ದೇನೆ. ಇಬ್ಬರು ಗಂಡು ಮಕ್ಕಳಿದ್ದು, ಅವರಿಗೆ ಮದುವೆ ಆಗಿದೆ .
ಅವರಿಗೆ ಆಸ್ತಿಯನ್ನು ಬರೆದು ಕೊಟ್ಟಿದ್ದೇನೆ. ಈಗ ನನ್ನ ಬಳಿ ಏನೂ ಇಲ್ಲ, ಎರಡನೇ ಮಗನ ಹೆಂಡತಿ ನನಗೆ ತೊಂದರೆ ನೀಡುತ್ತಿದ್ದಾರೆ. ಅವರು ಹೇಳಿದ ಹಾಗೆ ಕೇಳಬೇಕು ಅದು ನನಗೆ ಇಷ್ಟ ಇಲ್ಲ ಅದಕ್ಕೆ ಮನೆಬಿಟ್ಟು ಇಲ್ಲಿಗೆ ಬಂದೆ ಎಂದು ಮಾಹಿತಿ ನೀಡಿದ್ದಾರೆ.

ಇದರ ಆಧಾರದಲ್ಲಿ ವೃದ್ಧ ಭಕ್ತವತ್ಸಲ ಅವರನ್ನು ಸುಬ್ರಹ್ಮಣ್ಯ ಪೊಲೀಸ್ ಎಸ್‌ಐ ಮಂಜುನಾಥ್ ಅವರು ರವಿ ಕಕ್ಕೆಪದವು ಸಮಾಜಸೇವಕ ಟ್ರಸ್ಟ್ ನ ಸಹಾಯದಿಂದ ಠಾಣೆಗೆ ಕರೆತಂದು ಅವರ ಮಕ್ಕಳಿಗೆ ಫೋನ್ ಮಾಡಿ ಅವರನ್ನು ಠಾಣೆ ಗೆ ಕರೆಯಿಸಿ ಭಕ್ತವತ್ಸಲ ಅವರನ್ನು ಮಗನೊಂದಿಗೆ ಕಳುಹಿಸಿರುವುದಾಗಿ ತಿಳಿದು ಬಂದಿದೆ.