ಪಂಜ: ಬಾರೊಂದರಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಮಲಗಿದ್ದಲ್ಲಿಯೇ ಮೃತಪಟ್ಟ ರೀತಿಯಲ್ಲಿ ಪತ್ತೆಯಾದ ಘಟನೆ ಪಂಜದಿಂದ ವರದಿಯಾಗಿದೆ.
ಸುಳ್ಯ ತಾಲೂಕು ಐವತ್ತೊಕ್ಲು ಗ್ರಾಮದ ಧರಣೇಶ ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಪಂಜದಲ್ಲಿರುವ ಮಂಗಳ ಬಾರ್‌ನಲ್ಲಿ ಸ್ವಚ್ಚತಾ ಕೆಲಸ ಮಾಡಿಕೊಂಡಿದ್ದ ಅವರು ವಾರಕೊಮ್ಮೆಅವರ ಮನೆಗೆ ಬಂದು ಹೋಗುತ್ತಿದ್ದರು ಎನ್ನಲಾಗಿದೆ.















ಡಿ. 5 ರಂದು ಮನೆಗೆ ಬಂದಿದ್ದ ಅವರಿಗೆ ಸ್ವಲ್ಪ ಜ್ವರವಿದ್ದ ಕಾರಣ ಈ ಬಗ್ಗೆ ಆಸ್ಪತ್ರೆಯಿಂದ ಔಷದಿ ತೆಗೆದುಕೊಂಡಿದ್ದು ಬಳಿಕ ಮರುದಿನ ವಾಪಸ್ ಕೆಲಸಕೆಂದು ಬಾರ್‌ಗೆ ಹೋಗಿದ್ದರು ಎಂದು ಎನ್ನಲಾಗಿದೆ.
ಡಿ.6 ರಂದು ರಾತ್ರಿ ಸಮಯ ಸುಮಾರು 10 ಗಂಟೆಗೆ ಊಟ ಮಾಡಿ ಮಲಗಿದ್ವವರು ಬೆಳಿಗ್ಗೆ ಬಾರ್ ಸ್ವಚ್ಚತಾ ಕೆಲಸ ಮಾಡುವ ಮಹಿಳಾ ಸಿಬ್ಬಂದಿ ಗುಡಿಸಲು ಬಂದಾಗ ಧರಣೇಶ್ ರವರು ಮಲಗಿದ್ದಲ್ಲಿಯೇ ಇದ್ದು ಅವರನ್ನು ಎಚ್ಚರ ಮಾಡಿದಾಗ ಯಾವುದೇ ಪ್ರತಿಕ್ರಿಯಿಸದೆ ಮೃತಪಟ್ಟ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ.
ವಿಷಯ ತಿಳಿದ ಅವರ ಪತ್ನಿ ಘಟನಾ ಸ್ಥಳಕ್ಕೆ ತೆರಳಿ ನೋಡಿದಾಗ ಗಂಡ ಮೃತ ಪಟ್ಟಿರುವುದು ತಿಳಿದಿದೆ.
ಅನಾರೋಗ್ಯದಿಂದಲೋ ಅಥವಾ ಇನ್ಯಾವುದೋ ಕಾರಣದಿಂದಲೋ ಮೃತಪಟ್ಟಿರಬಹುದಾಗಿದ್ದು, ಈ ಬಗ್ಗೆ ಮೃತರ ಪತ್ನಿ ಜಲಜಾಕ್ಷಿ ಯವರು ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿರುವ ಪೊಲೀಸರು ಯುಡಿಆರ್ ನಂಬ್ರ: 36/2025 ಕಲಂ: 194 BNSS ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.










