ಮಂಡೆಕೋಲು : ಅಶಕ್ತ ಕುಟುಂಬಗಳಿಗೆ ಮಾಶಾಸನ ವಿತರಣೆ

0


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ಗ್ರಾಮದ ಮಂಡೆಕೋಲು ಒಕ್ಕೂಟದ ಕಾರ್ಯವ್ಯಾಪ್ತಿಯಡಿಯಲ್ಲಿ ಬರುವ ಮೂರು ಅಶಕ್ತ ಕುಟುಂಬಗಳಿಗೆ ಮಾಶಾಸನ ವಿತರಿಸಲಾಯಿತು. ಯಶೋಧ ಕಣೆಮರಡ್ಕ, ಪೂವಮ್ಮ ತೋಟಪ್ಪಾಡಿ, ಪಿಲೆತ್ತಿ ಮಂಡೆಕೋಲು ಎಂಬವರಿಗೆ ಮಾಶಾಸನ ಆದೇಶ ಪ್ರತಿ ವಿತರಿಸಲಾಯಿತು.


೨೦೨೨-೨೩ನೇ ಸಾಲಿನಲ್ಲೂ ಈ ಕುಟುಂಬಗಳಿಗೆ ಮಾಶಾಸನ ನೀಡಲಾಗುತ್ತಿದ್ದು, ೨೦೨೩-೨೪ ನೇ ಸಾಲಿಗೂ ಸಂಬಂಧಪಟ್ಟವರಿಗೆ ಈ ಯೋಜನೆಯನ್ನು ವಿಸ್ತರಿಸಲಾಗಿದೆ.