ಹೊಸಗದ್ದೆ ಜನಾರ್ದನ ಗೌಡ ಕೋಲ್ಚಾರು ನಿಧನ

0

ಆಲೆಟ್ಟಿ ಗ್ರಾಮದ (ಹೊಸಗದ್ದೆ) ಜನಾರ್ದನ ಗೌಡ ಕೋಲ್ಚಾರು ರವರು ಅಲ್ಪ ಕಾಲದ ಅಸೌಖ್ಯದಿಂದ ತನ್ನ ಸ್ವಗೃಹದಲ್ಲಿ ಜೂ.18 ರಂದು ನಿಧನರಾದರು. ಅವರಿಗೆ 62 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಶ್ರೀಮತಿ ಹೇಮಲತಾ, ಓರ್ವ ಪುತ್ರ ಕೆ.ವಿ.ಜಿ ಮೆಡಿಕಲ್ ಕಾಲೇಜು ಉದ್ಯೋಗಿ ಆದರ್ಶ ಕೋಲ್ಚಾರು, ಓರ್ವ ಪುತ್ರಿ ಕೆ.ವಿ.ಜಿ.ಯಲ್ಲಿ ನರ್ಸಿಂಗ್ ವಿಭಾಗದ ಉದ್ಯೋಗಿ ಕು.ನಿಶ್ಮಿತಾ, ಸಹೋದರರಾದ ನಿತ್ಯಾನಂದ ಗೌಡ ಕೋಲ್ಚಾರು,
ಬಸಪ್ಪ ಗೌಡ ಕೋಲ್ಚಾರು, ಸಹೋದರಿಯರಾದ ಶ್ರೀಮತಿ ಇಂದಿರಾವತಿ, ಶ್ರೀಮತಿ ಕಮಲಾ, ಶ್ರೀಮತಿ ಕೋಮಲಾಂಗಿ ಹಾಗೂ ಕುಟುಂಬಸ್ಥರನ್ನು ,ಬಂಧು ಮಿತ್ರರನ್ನು ಅಗಲಿದ್ದಾರೆ.