ಜುಲೈ 5 ರಂದು ಸುಳ್ಯ ರೋಟರಿ ಕ್ಲಬ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

0

ರೋಟರಿ ಅಧ್ಯಕ್ಷರಾಗಿ ಆನಂದ‌ ಖಂಡಿಗ, ಕಾರ್ಯದರ್ಶಿ ಕಸ್ತೂರಿ ಶಂಕರ್

ಸುಳ್ಯ ರೋಟರಿ ಕ್ಲಬ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜುಲೈ 5 ರಂದು ಸಂಜೆ 6 ರಿಂದ ರಥಬೀದಿಯ ರೋಟರಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಸುಳ್ಯ ರೋಟರಿ ಕ್ಲಬ್‌ನ ನೂತನ ಅಧ್ಯಕ್ಷ ಆನಂದ ಖಂಡಿಗ ತಿಳಿಸಿದ್ದಾರೆ.

ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ನೋನಲ್ ಜಯ್‌ರಾಜ್ ಭಂಡಾರಿ ಪದಗ್ರಹಣ ನೆರವೇರಿಸುವರು. ಮುಖ್ಯ ಅತಿಥಿಯಾಗಿ ರೋಟರಿ ಕ್ಲಬ್ ಮಾಜಿ ಜಿಲ್ಲಾ ಗವರ್ನರ್ ಎಂ.ಲಕ್ಷ್ಮೀ ನಾರಾಯಣ ಭಾಗವಹಿಸಲಿದ್ದಾರೆ.

ವಲಯ 5ರ ಅಸಿಸ್ಟೆಂಟ್ ಗವರ್ನರ್ ಪುರಂದರ ರೈ, ಝೋನಲ್‌ ಲೆಪ್ಟಿನೆಂಟ್ ನವೀನ್ ಚಂದ್ರ ನಾಯ್ಕ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಅವರು ವಿವರಿಸಿದರು.

2023-24 ನೇ ಸಾಲಿನ ನೂತನ ಪದಾಧಿಕಾರಿಗಳು:


2023-24ನೇ ಸಾಲಿನಲ್ಲಿ ಸುಳ್ಯ ರೋಟರಿ ಕ್ಲಬ್ ಅಧ್ಯರಾಗಿ ಆನಂದ ಖಂಡಿಗ, ಕಾರ್ಯದರ್ಶಿಯಾಗಿ ಕಸ್ತೂರಿ ಶಂಕರ್ ನಿಸರ್ಗ, ಖಜಾಂಜಿಯಾಗಿ ಆಶಿತ ಕೇಶವ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಡಾ.ರಾಮ್‌ಮೋಹನ್ ಕೆ.ಎನ್. ಸಾರ್ಜೆಂಟ್ ಮಾಧವ ಬಿ.ಟಿ, ಸಮುದಾಯ ಸೇವೆ ನಿರ್ದೇಶಕರಾಗಿ ಬಾಲಕೃಷ್ಣ ಎಸ್.ಬಿ ಲ್ಯಾಬ್, ಜಿಲ್ಲಾ ಯೋಜನಾ ನಿರ್ದೇಶಕರಾಗಿ ಡಾ.ಶ್ರೀಕೃಷ್ಣ ಬಿ.ಎನ್, ವೃತ್ತಿ ಸೇವೆ ನಿರ್ದೇಶಕರಾಗಿ ಮಧುಸೂದನ್, ಕ್ಲಬ್ ತರಬೇತಿ ಅಧಿಕಾರಿಯಾಗಿ ಸಿ.ಎ ಗಣೇಶ್ ಭಟ್, ಯೂತ್ ಸರ್ವೀಸ್ ನಿರ್ದೇಶಕರಾಗಿ ಡಾ ಪುರುಷೋತ್ತಮ ಕೆ.ಜಿ, ಐಪಿಪಿ ಚಂದ್ರಶೇಖರ್ ಪೇರಾಲು, ಕ್ಲಬ್ ಸೇವೆ ನಿರ್ದೇಶಕರಾಗಿ ಯೋಗಿತಾ ಗೋಪಿನಾಥ್, ರೊಟರಿ ಫೌಂಡೇಶನ್ ನಿರ್ದೇಶಕರಾಗಿ ಪ್ರಭಾಕರನ್‌ ನಾಯರ್‌, ಪೋಲಿಯೊ ಪ್ಲಸ್ ನಿರ್ದೇಶಕರಾಗಿ ಸೀತಾರಾಮ ರೈ ಸವಣೂರು, ಅಂತರಾಷ್ಟ್ರೀಯ ಸೇವಾ ನಿರ್ದೇಶಕರಾಗಿ ಸತೀಶ್ ಕೆ.ಜಿ, ಐ.ಟಿ ಮತ್ತು ವೆಬ್ ಸೇವಾ ನಿರ್ದೇಶಕರಾಗಿ ಸನತ್ ಪೆರಿಯಡ್ಕ, ಸದಸ್ಯತ್ವ ಅಭಿವೃದ್ಧಿ ನಿರ್ದೇಶಕರಾಗಿ ಹರಿರಾಯ ಕಾಮತ್ ಕಾರ್ಯ ನಿರ್ವಹಿಸಲಿದ್ದಾರೆ.
ರೋಟರಿ ಕ್ಲಬ್‌ನ ಸೇವಾ ಯೋಜನೆಗಳು:
ಕಳೆದ 52 ವರ್ಷಗಳಿಂದ ಸುಳ್ಯ ರೋಟರಿ ಕ್ಲಬ್ ನಿರಂತರ ಸೇವಾ ಕಾರ್ಯಗಳನ್ನು ಮಾಡುತ್ತಾ ಬಂದಿದೆ. 1981 ರಲ್ಲಿ ಆಂಗ್ಲ ಮಾಧ್ಯಮ ಶಾಲೆಯನ್ನು ಸ್ಥಾಪಿಸುವ ಮೂಲಕ ರೋಟರಿ ಕ್ಲಬ್ ಸುಳ್ಯವು ಸಮುದಾಯ ಸೇವೆಗೆ ಮುಂದಡಿಯಿಟ್ಟಿರುತ್ತದೆ. ಸುಳ್ಯ ನಗರ ವ್ಯಾಪ್ತಿಯ ಓಡಬಾಯಿಯಲ್ಲಿ ಸ್ಥಾಪಿತವಾಗಿರುವ ರೋಟರಿ-ಇನ್ಫೋಸಿಸ್ ತೂಗು ಸೇತುವೆ, ರೆಸ್ಟ್ ರೂಮ್, ಸುಳ್ಯ ರೋಟರಿಯು 50 ವರ್ಷ ಪೂರೈಸಿದ ಸಂದರ್ಭದಲ್ಲಿ ಜಯನಗರದಲ್ಲಿ ಸ್ಥಾಪಿತವಾಗಿರುವ ಹಿಂದೂ ರುದ್ರಭೂಮಿ, ಬಾಳುಗೋಡಿನಲ್ಲಿ ನಿರ್ಮಾಣಗೊಂಡ ಬಯಲು ರಂಗಮಂದಿರ ಹಾಗೂ ಇನ್ನಿತರ ಸಮಾಜ ಮುಖಿ ಕಾರ್ಯಗಳು ಸುಳ್ಯ ರೋಟರಿ ಸಂಸ್ಥೆಯ ಸಾಮಾಜಿಕ ಹೆಗ್ಗುರುತುಗಳು.
ಸಂಸ್ಥೆಯ 53ನೇ ಅಧ್ಯಕ್ಷರಾಗಿ 2023-24ನೇ ಸಾಲಿನಲ್ಲಿ ಪ್ರತಿ ವರ್ಷದಂತೆ ರೋಟರಿ ಜಿಲ್ಲಾ ಯೋಜನೆಗಳಾದ ಸಮುದಾಯ ಸೇವೆ, ವೃತ್ತಿಸೇವೆ, ಹಾಗೂ ಇತರ ಸೇವೆಗಳ ಅಡಿಯಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಮುಖ್ಯ ಯೋಜನೆಯಾಗಿ ಶ್ರೀ ಚೆನ್ನಕೇಶವ ದೇವಸ್ಥಾನದ ವಠಾರದಲ್ಲಿ ಸಾರ್ವಜನಿಕರಿಗೆ ಉಪಯೋಗವಾಗುವಂತೆ ಶೌಚಾಲಯ ನಿರ್ಮಾಣ ಮಾಡಲಾಗುವುದು. ಶ್ರೀ ಚೆನ್ನಕೇಶವ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ನಗರ ಪಂಚಾಯತ್ ಸಹಕಾರದೊಂದಗೆ ಯೋಜನೆಯನ್ನು ಕಾರ್ಯಗತಗೊಳಿಸಲಾಗುವುದು. ಪರಿಸರ ರಕ್ಷಣೆ ವಿಷಯದಲ್ಲಿ ವನಮಹೋತ್ಸವ ಕಾರ್ಯಕ್ರಮ, ಪರಿಣತರಿಂದ ಶಾಲಾ ಮಕ್ಕಳಿಗೆ ಪರಿಸರ ರಕ್ಷಣೆ ಬಗ್ಗೆ ಮಾಹಿತಿ ನೀಡುವುದು, ರಕ್ತದಾನ ಶಿಬಿರ ಹಾಗೂ ಇನ್ನಿತರ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಆನಂದ‌ ಖಂಡಿಗ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ ಪೇರಾಲು, ನೂತನ ಕಾರ್ಯದರ್ಶಿ ಕಸ್ತೂರಿ ಶಂಕರ್, ಪದಾಧಿಕಾರಿಗಳಾದ ರಾಮಚಂದ್ರ ಪಿ, ಮಧುಸೂಧನ ಕುಂಭಕ್ಕೋಡು,ಪುರುಷೋತ್ತಮ ಕೆ.ಜಿ, ಪ್ರಭಾಕರನ್ ನಾಯರ್ ಸಿ.ಎಚ್, ಹರಿರಾಯ ಕಾಮತ್, ಡಾ.ರಾಮ್ ಮೋಹನ್, ಬೆಳ್ಯಪ್ಪ ಗೌಡ ಉಪಸ್ಥಿತರಿದ್ದರು