ಆಲೆಟ್ಟಿ ರಸ್ತೆಯ ತಿರುವಿನಲ್ಲಿ ಬೀಳುವ ಸ್ಥಿತಿಯಲ್ಲಿದೆ ಬೃಹತ್ ಗಾತ್ರದ ಅಪಾಯಕಾರಿ ಮರ- ವಿದ್ಯುತ್ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ

0

ಆಲೆಟ್ಟಿ ಮುಖ್ಯ ರಸ್ತೆಯ ತಿರುವಿನಲ್ಲಿ ಬೃಹತ್ ಗಾತ್ರದ ಅಪಾಯಕಾರಿ ಮರವೊಂದು ಈಗಲೋ ಆಗಲೋ ಬೀಳುವ ಹಂತದಲ್ಲಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮರ ರಸ್ತೆಯ ಮೇಲೆ ವಾಲಿಕೊಂಡಿದೆ.
ಒಂದು ವೇಳೆ ಮರ ಬಿದ್ದರೆ ವಿದ್ಯುತ್ ಲೈನಿನ ಮೇಲೆ ಬೀಳುವ ಸಾಧ್ಯತೆ ಇದ್ದು ಸುಮಾರು 4 ರಿಂದ 5 ವಿದ್ಯುತ್ ಕಂಬಗಳು ಮುರಿದು ಬೀಳಬಹುದು. ಇದರಿಂದ ವಿದ್ಯುತ್ ಸಂಪರ್ಕವು ಕಡಿತಗೊಳ್ಳುವ ಸಾಧ್ಯತೆಯಿದೆ. ಭಾರಿ ಅನಾಹುತ ಸಂಭವಿಸುವ ಮೊದಲು ಸಂಬಂಧ ಪಟ್ಟ ಇಲಾಖೆಯವರು ಹಾಗೂ ಜನಪ್ರತಿನಿಧಿಗಳು ಗಮನಹರಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.