ಸುಳ್ಯ : ಮೊಗೇರ ಯುವ ವೇದಿಕೆ ಮಹಾಸಭೆ

0

ಸುಳ್ಯ ತಾಲೂಕು ಮೊಗೇರ ಯುವ ವೇದಿಕೆಯ ವಾರ್ಷಿಕ ಮಹಾಸಭೆ ಜು. 23 ರಂದು ಸುಳ್ಯದಲ್ಲಿ ನಡೆಯಿತು.
ಯುವ ವೇದಿಕೆ ಅಧ್ಯಕ್ಷ ಪ್ರಕಾಶ್ ಪಾತೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಮೊಗೇರ ಸಂಘದ ಅಧ್ಯಕ್ಷ ಕರುಣಾಕರ ಪಾತೆಟ್ಟಿ , ಗೌರವ ಸಲಹೆಗಾರರಾದ ಕೇಶವ ಮಾಸ್ತರ್ , ದೇವಪ್ಪ ಹೈದಂಗೂರು , ಮಾಜಿ ಅಧ್ಯಕ್ಷ ಮಹೇಶ್ ಬಂಗ್ಲೆಗುಡ್ಡೆ , ಪ್ರಕಾಶ್ ಬಂಗ್ಲೆಗುಡ್ಡೆ ವೇದಿಕೆಯಲ್ಲಿದ್ದರು. ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಪಾರೆ ಕಾರ್ಯಕ್ರಮ ನಿರ್ವಹಿಸಿದರು.

ಸಭೆಯಲ್ಲಿ ನೂತನ ಯುವ ವೇದಿಕೆ ರಚನೆ , ಮೊಗೇರ ಜಾತಿ ಪ್ರಮಾಣ , ಕೆಸರುಗದ್ದೆ ಕ್ರೀಡಾಕೂಟ ಮತ್ತಿತರ ವಿಚಾರಗಳ ಕುರಿತು ಚರ್ಚಿಸಲಾಯಿತು.