ಶೇಣಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಶೌಚಾಲಯ ಕಟ್ಟಡದ ಉದ್ಘಾಟನೆ

0

ಅಮರಪಡ್ನೂರು ಗ್ರಾಮದ ಶೇಣಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ ಮತ್ತು ಶಿಕ್ಷಣ ಇಲಾಖೆಯ ಅನುದಾನ ರೂ 5.30ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಸುಸಜ್ಜಿತ ನೂತನ ಶೌಚಾಲಯ ಕಟ್ಟಡವನ್ನು ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪದ್ಮಪ್ರಿಯ ಮೇಲ್ತೋಟ ರವರು ಜು.29 ರಂದು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ
ಶಾಲೆಯ ಎಸ್. ಡಿ. ಎಂ. ಸಿ ಅಧ್ಯಕ್ಷ ಮಾಧವ ಪಿಂಡಿಬನ, ಶಿಕ್ಷಣ ಇಲಾಖೆಯ ಇಸಿಒ ಶ್ರೀಮತಿ ನಳಿನಿ, ಪಿ.ಡಿ.ಒ ದಯಾನಂದ ಪತ್ತುಕುಂಜ, ಸದಸ್ಯರುಗಳಾದ ಅಶೋಕ್ ಚೂಂತಾರು,ಸೀತಾ ಹೆಚ್, ಮೀನಾಕ್ಷಿ ಚೂಂತಾರು, ವೆಂಕಟ್ರಮಣ ಇಟ್ಟಿಗುಂಡಿ , ಹೂವಪ್ಪ ಗೌಡ ಆರ್ನೋಜಿ, ಕೃಷ್ಣಪ್ರಸಾದ್ ಮಾಡಬಾಕಿಲು,
ಮಾಜಿ ಪಂಚಾಯತ್ ಸದಸ್ಯೆ ನಿರ್ಮಲಾ ರೈ, ಶಾಲಾ ಮುಖ್ಯ ಶಿಕ್ಷಕ ಪ್ರಭಾಕರ ಮಾಡಬಾಕಿಲು, ನಿವೃತ್ತ ಮುಖ್ಯ ಶಿಕ್ಷಕಿ ರಮಾ ಕಿಶೋರಿ, ಲೋಕನಾಥ್ ಬೊಳುಬೈಲು, ಗುತ್ತಿಗೆದಾರರಾದ ಹರಿಪ್ರಸಾದ್ ಎಲಿಮಲೆ, ಶಾಲಾ ಶಿಕ್ಷಕರು, ಪೊಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.‌

ಜಲಧಿ ಇವೆಂಟ್ಸ್ ರವರಿಂದ ಹಿಂದುಳಿದ ವರ್ಗದ ಬಡ ವಿದ್ಯಾರ್ಥಿಗಳ 1 ವರ್ಷದ ವಿದ್ಯಾಭ್ಯಾಸಕ್ಕೆ ಸಹಾಯಧನದ ಚೆಕ್ ಹಸ್ತಾಂತರಿಸಿದರು. ಗುತ್ತಿಗೆದಾರ ಹರಿಪ್ರಸಾದ್ ಎಲಿಮಲೆ ಯವರನ್ನು ಸನ್ಮಾನಿಸಲಾಯಿತು.
ಶಿಕ್ಷಕ ರಂಗಯ್ಯ ವಂದಿಸಿದರು. ಶಿಕ್ಷಕಿ ಶ್ರೀಮತಿ ಮಂಗಳಾ
ಕಾರ್ಯಕ್ರಮ ನಿರೂಪಿಸಿದರು.