ಉಪಾಧ್ಯಕ್ಷ ಸ್ಥಾನಕ್ಕೆ ಎಚ್.ಎಲ್.ವೆಂಕಟೇಶ್ ನಾಮಪತ್ರ ಸಲ್ಲಿಕೆ
ಅವಿರೋಧ ಆಯ್ಕೆ ಸಂಭವ
ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷ ಮತ್ತು ಉಪಾಧ್ಯಕ್ಷತೆ ಚುನಾವಣೆ ಇಂದು ನಡೆಯಲಿದ್ದು,
ಅಧ್ಯಕ್ಷ ಸ್ಥಾನ ಹಿಂದುಳಿದ ಎ ಮಹಿಳೆಗೆ ಮೀಸಲಾತಿ ನಿಗದಿಯಾಗಿದ್ದು ಏನೆಕಲ್ಲು ಗ್ರಾಮದ ದೇವರಹಳ್ಳಿ ವಾರ್ಡ್ ನ ಸುಜಾತಾ ಕಲ್ಲಾಜೆ ನಾಮಪತ್ರ ಸಲ್ಲಿಸಿದ್ದಾರೆ.
ಉಪಾಧ್ಯಕ್ಷತೆ ಸಾಮಾನ್ಯಕ್ಕೆ ನಿಗದಿಯಾಗಿದ್ದು, ವೆಂಕಟೇಶ್ ಎಚ್.ಎಲ್. ನಾಮಪತ್ರ ಸಲ್ಲಿಸಿದ್ದಾರೆ.
ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಒಬ್ಬೊಬ್ಬರೇ ನಾಮಪತ್ರ ಸಲ್ಲಿಸಿರುವುದರಿಂದ ಅವಿರೋಧ ಆಯ್ಕೆ ನಿಚ್ಚಳವಾಗಿದೆ.
ಚುನಾವಣಾ ಅಧಿಕಾರಿಯಾಗಿ
ಸುಬ್ರಹ್ಮಣ್ಯ ಉಪ ವಿಭಾಗದ ಪ್ರಮೋದ್ ಕುಮಾರ್ ಕೆ. ನಾಮಪತ್ರ ಸ್ವೀಕರಿಸಿದರು.
ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಪಿ. ಡಿ. ಓ ಆಕಾಶ್ ಹಾಗೂ ಕಾರ್ಯದರ್ಶಿ ಮೋನಪ್ಪ ಸಹಕರಿಸಿದರು.