ಶೋಭಾ ಕುಕ್ಕಪ್ಪನಮನೆ ನಿಧನ

0


ಏನೆಕಲ್ಲು ಗ್ರಾಮದ ಕುಕ್ಕಪ್ಪನಮನೆ ದಿ.ತಿರುಮಲೇಶ್ವರ ಗೌಡರ ಪತ್ನಿ ಶ್ರೀಮತಿ ಶೋಭಾರವರು ಅಲ್ಪಕಾಲದ ಅಸೌಖ್ಯದಿಂದ ಇಂದು ಸಂಜೆ (ಆ.11ರಂದು) ಸುಳ್ಯದ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 70 ವರ್ಷ ವಯಸ್ಸಾಗಿತ್ತು.


ಮೃತರು ಓರ್ವ ಪುತ್ರ ಅಶೋಕ್, ಓರ್ವ ಪುತ್ರಿ ಶ್ರೀಮತಿ ಭಾಗ್ಯಾ ವೆಂಕಪ್ಪ ಗೌಡ ಕಂಪ, ಸೊಸೆ, ಅಳಿಯ, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.