ಊರುಬೈಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ

0

ಚೆಂಬು ಊರುಬೈಲು ಶಾಲೆಯಲ್ಲಿ ನಡೆದ 76ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಲಕ್ಷ್ಮಣ ಜಿ ಆರ್ ಇವರು ಧ್ವಜಾರೋಹಣ ನೆರವೇರಿಸುವುದರ ಮೂಲಕ ಪ್ರಾರಂಭಗೊಂಡು , ವಿದ್ಯಾರ್ಥಿಗಳಿಂದ ವಿವಿಧ ಘೋಷಣೆಗಳೊಂದಿಗೆ ಮೆರವಣಿಗೆ ಸಾಗಿ ಸಂಭ್ರಮಿಸಲಾಯಿತು. ನಂತರ ಸಭಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ಚಿತ್ರಕಲೆ ಮತ್ತು ಪ್ರಬಂಧ ಸ್ಪರ್ಧೆಯ ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು.


ಸಭೆಯ ವೇದಿಕೆಯಲ್ಲಿ ಚೆಂಬು ಗ್ರಾ.ಪಂ. ಅಧ್ಯಕ್ಷರಾದ ತೀರ್ಥರಾಮ ಪಿ ಜಿ, ಉಪಾಧ್ಯಕ್ಷರಾದ ಶಾರದ ಸೂರ್ಯಕುಮಾರ, ಸದಸ್ಯರಾದ ರಮೇಶ ಹುಲ್ಲುಬೆಂಕಿ, ವಸಂತ ಎನ್ ಟಿ, ಶ್ರೀಮತಿ ಕುಸುಮಾವತಿ, ಎಸ್ ಡಿ ಎಂ ಸಿ ಅಧ್ಯಕ್ಷರು ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಚೆಂಬು ಗ್ರಾ.ಪಂ. ಎಲ್ಲಾ ಸದಸ್ಯರುಗಳು, ಸಿಬ್ಬಂದಿ ವರ್ಗ, ಶಾಲಾ ಎಸ್.ಡಿ.ಎಂ.ಸಿ ಸದಸ್ಯರು, ಪೋಷಕರು, ಹಿರಿಯ ವಿದ್ಯಾರ್ಥಿಗಳು, ಶಾಲಾ ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಗಳು , ವಿದ್ಯಾರ್ಥಿಗಳು ಹಾಜರಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ “ಹಸಿರೇ ಉಸಿರು” ಎಂಬ ಕಾರ್ಯಕ್ರಮದಡಿ ಗ್ರಾ.ಪಂ.ಚೆಂಬು ವತಿಯಿಂದ ಶಾಲೆಯಲ್ಲಿ 40 ಕ್ಕಿಂತ ಹೆಚ್ಚಿನ ಹಣ್ಣಿನ ಗಿಡಗಳನ್ನು ನೆಡಲಾಯಿತು. ನಂತರ ಎಲ್ಲರಿಗೂ ಸಿಹಿಯನ್ನು ಹಂಚಲಾಯಿತು.
ಕಾರ್ಯಕ್ರಮವನ್ನು ಶಾಲಾ ಮುಖ್ಯಶಿಕ್ಷಕರಾದ ಶ್ರೀ ಸೋಮಣ್ಣ ಕೆ ಆರ್ ಸ್ವಾಗತಿಸಿ ,ವಂದಿಸಿದರು. ವಿಕ್ರಾಂತ ಎಂ ಬಿ ನಿರೂಪಿಸಿದರು.