ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಗಣಪತಿ ಹೋಮ ,ದುರ್ಗಾಪೂಜೆ

0

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ 48 ದಿನಗಳ ಕಾಲ ನಡೆಯುವ ಗಣಪತಿ ಹೋಮ ಮತ್ತು ದುರ್ಗಾಪೂಜೆ ಜು.17 ರಂದು ಪ್ರಾರಂಭಗೊಂಡಿದೆ.


ಜು.17 ರಿಂದ ಸೆ.02 ರವರೆಗೆ ಪ್ರತೀ ದಿನ ಗಣಪತಿ ಹೋಮ ಹಾಗೂ ದುರ್ಗಾಪೂಜೆ ನಡೆಯುತ್ತಿದೆ.
ಆ.17 ರಂದು ಗಣಹೋಮ,ರಾತ್ರಿ ದುರ್ಗಾಪೂಜೆ ನಡೆಯಿತು.
ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ ಹೆಬ್ಬಾರ್ ಪೂಜಾ ಕಾರ್ಯ ನೆರವೇರಿಸಿದರು.


ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ,ಸದಸ್ಯರು ,ಭಕ್ತಾದಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.