ಬೆಳ್ಳಾರೆ ಗ್ರಂಥಾಲಯದಲ್ಲಿ ವಿಶೇಷ ಚೇತನರ ಸ್ವ ಸಹಾಯ ಸಂಘಗಳ ಉದ್ಘಾಟನೆ

0

ಬೆಳ್ಳಾರೆ ಲಕ್ಷ್ಮಿ ಸಂಜೀವಿನಿ ಒಕ್ಕೂಟ ಇದರ ಆಶ್ರಯದಲ್ಲಿ, ಚೈತನ್ಯ ವಿಶೇಷ ಚೇತನರ ಸಂಘ ಮತ್ತು ಅಧಮ್ಯ ಆರೈಕೆದಾರರ ಸ್ವ ಸಹಾಯ ಸಂಘ ಬೆಳ್ಳಾರೆ ಗ್ರಂಥಾಲಯದಲ್ಲಿ ಆ.19 ರಂದು ಉದ್ಘಾಟನೆ ಗೊಂಡಿತು.


ಪಂಚಾಯತ್ ನೂತನ ಅಧ್ಯಕ್ಷರಾದ ನಮಿತಾ ಎಲ್ ರೈ ಸಂಘ ಉದ್ಘಾಟಿಸಿ ಶುಭ ಹಾರೈಸಿದರು, ಸಂಜೀವಿನಿ ವಲಯ ಮೇಲ್ವಿಚಾರಕರಾದ ಅವಿನಾಶ್ ವಿಶೇಷ ಚೇತನರಿಗೆ ಸಂಘದ ಬಗ್ಗೆ ಮತ್ತು ಸವಲತ್ತು ಗಳ ಮಾಹಿತಿ ನೀಡಿದರು. ಒಕ್ಕೂಟ ಅಧ್ಯಕ್ಷರಾದ ನಳಿನಾಕ್ಷಿ ಯವರು ಉಪಸ್ಥಿತರಿದ್ದರು. ಒಕ್ಕೂಟ ಎಂಬಿಕೆ /ಎಲ್.ಸಿ.ಆರ್.ಪಿಗಳು, ಗ್ರಂಥಾಲಯ ಪಾಲಕಿ ಶಶಿಕಲಾ, ಸಖಿ ಗಳು ಹಾಗೂ ವಿಶೇಷ ಚೇತನ ಸದಸ್ಯರು,ಆರೈಕೆದಾರರು ಉಪಸ್ಥಿತರಿದ್ದರು.
ಗ್ರಾಮ ಪಂಚಾಯತ್ ನ ವಿ.ಆರ್.ಡಬ್ಲ್ಯೂ ಪುಷ್ಪಾರವರು ಸ್ವಾಗತಿಸಿ,ವಂದಿಸಿದರು.