ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ತನ್ವಿ ತಂಟೆಪ್ಪಾಡಿ ಪ್ರಥಮ

0

ಆಗಸ್ಟ್ 5 ರಂದು ಆನ್ಲೈನ್ ನಲ್ಲಿ ನಡೆದ ಬಿ.ಕೆ.ಎಸ್. ಐಯ್ಯಂಗಾರ್ ಸ್ಮರಣಾರ್ಥ 7ನೇ ವರ್ಷದ ರಾಷ್ಟ್ರ ಮಟ್ಟದ ಮುಕ್ತ ಯೋಗಾಸನ ಚಾಂಪಿಯನ್ ಶಿಪ್ -2023 ರಲ್ಲಿ ನಿರಂತರ ಯೋಗ ಕೇಂದ್ರ ಪಂಜದ ವಿದ್ಯಾರ್ಥಿನಿಯಾದ ತನ್ವಿ ತಂಟೆಪ್ಪಾಡಿ 08 ರಿಂದ 12 ವರ್ಷದ ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ.

ಚೋಕ್ಕಾಡಿ ಆಂಗ್ಲ ಮಾಧ್ಯಮ ಶಾಲೆ ಕುಕ್ಕುಜಡ್ಕದಲ್ಲಿ 5ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಕು. ತನ್ವಿ ಕಳಂಜ ಗ್ರಾಮದ ತಂಟೆಪ್ಪಾಡಿ ಶೇಷಪ್ಪ ನಾಯಕರ ಮೊಮ್ಮಗಳು, ಹರಿಶ್ಚಂದ್ರ ಮತ್ತು ಶ್ರೀಮತಿ ಜ್ಯೋತಿ ದಂಪತಿಯ ಪುತ್ರಿ. ಇವರು ಯೋಗ ಗುರು ಶರತ್ ಮರ್ಗಿಲಡ್ಕ ರವರ ಜೊತೆ ಮಾರ್ಗದರ್ಶನ ಪಡೆಯುತ್ತಿದ್ದಾಳೆ.