ಕೋಡಿ ಕುಶಾಲಪ್ಪ ಬದುಕು ಬರಹ ಒಂದು ನೆನಪು

0


ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಂಪಾಜೆ ಹೋಬಳಿ ಘಟಕ , ದಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ಘಟಕ ಹಾಗೂ ಸಂದ್ಯಾ ರಶ್ಮಿ ಸಾಹಿತ್ಯ ಸಂಘ ಸುಳ್ಯ ಇದರ ಸಹಯೋಗದಲ್ಲಿ ಕೋಡಿ ಕುಶಾಲಪ್ಪ ಗೌಡ ಬದುಕು ಬರಹ ಒಂದು ನೆನಪು ಕಾರ್ಯ ಕ್ರಮ ಜ್ಯೋತಿ ಪ್ರೌಢಶಾಲೆ ಪೆರಾಜೆ ಇಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಜ್ಯೋತಿ ಪ್ರೌಢಶಾಲೆ ಅಧ್ಯಕ್ಷರಾದ ಡಾ. ಜ್ಞಾನೇಶ್ ನಡೆಸಿ ಕೊಡಿಯವರ ಹಾಗೂ ಪೆರಾಜೆಯ ಅವಿನಾಭಾವ ಸಂಭಂದವನ್ನು ನೆನಪಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಮುಖ್ಯ ಭಾಷಣಕಾರರಾಗಿ ಸಾಹಿತಿ ಲೀಲಾ ದಾಮೋದರ್ ಇವರು ಕೋಡಿಯವರ ಕೃತಿಗಳ ಬಗ್ಗೆ ಪರಿಚಯಿಸಿ ಅವರ ಸಾಹಿತ್ಯದ ಮಹತ್ವವನ್ನು ನೆನಪಿಸಿದರು. ಕೋಡಿ ಕುಶಾಲಪ್ಪ ಅವರ ಸುಪುತ್ರಿ,ಶ್ರೀಮತಿ ಮಾಲಿನಿ ಕೆ ಎಸ್ ಇವರು ಕೊಡಿಯವರ ಬದುಕು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಒಂದು ಆದರ್ಶವಾಗಿದೆ. ಹಾಗೂವಿದ್ಯಾರ್ಥಿಗಳು ಸಾಹಿತ್ಯದ ಆಸಕ್ತಿಯನ್ನು ಬೆಳೆಸಿಕೊಳ್ಳಲು ಕರೆ ನೀಡಿದರು. ಮುಖ್ಯ ಅತಿಥಿಗಳಾಗಿ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ್ ಪೇರಾಲ್ , ಪ್ರೊ. ಸಂಜೀವ ಕುದುಪಾಜೆ, ಲೋಕನಾಥ್ ಅಮೆಚೂರ್ ಹಾಗೂ ಶಾಲಾ ಮುಖ್ಯ ಶಿಕ್ಷಕ ನಾಗರಾಜ್ ಆಗಮಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಅಧ್ಯಕ್ಷತೆಯನ್ನು ಗೋಪಾಲ್ ಪೆರಾಜೆ ಅಧ್ಯಕ್ಷರು , ಸಂಪಾಜೆ ಹೋಬಳಿ ಘಟಕ ಇವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಶ್ರೀ ರಂಗಯ್ಯ, ಲಿಂಗಪ್ಪ ಗೌಡ, ಕೇಶವ ಸಿ ಎ, ಬಾರಿಯಂಡ ಜೋಯಪ್ಪ, ಲತಾಶ್ರಿ ಸುಪ್ರೀತ್, ಪದ್ಮಯ್ಯ ಕುಂಬಳಚೇರಿ, ವಿನೋದ್ ಮೂಡಗದ್ದೆ,ಕೋಡಿ ಭಾಸ್ಕರ, ರಾಮಚಂದ್ರ ಎನ್ ಜಿ, ಪ್ರೊ ದಾಮೋದರ ಗೌಡ, ಸಂಗೀತಾ ರವಿರಾಜ್ ಹೊಸೂರ್, ಗಣಪತಿ ಕುಂಬಳಚೆರಿ, ದಯಾನಂದ, ತೀರ್ಥರಾಮ ಹೊದ್ದೆಟ್ಟಿ,ವೇಣುಗೋಪಾಲ,ವಿಧಾಕುಮಾರಿ, ಜೀತೆಂದ್ರ ಎನ್ ಎ, ನಾಗೇಶ್ ಕುಂದಲಪ್ಪಾಡಿ,ಎಸಿ ಹೊನ್ನಪ್ಪ, ಜಗದೀಶ್ ಕುಂಬಲಚೆರಿ, ಇವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಚೆಂಬು ಸಾಹಿತ್ಯ ವೇದಿಕೆ ವತಿಯಿಂದ ಆಯೋಜಿಸಿದ ಎಂ ಜಿ ಕಾವೇರಮ್ಮ ಅರೆಭಾಷೆ ಕವನ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ರಂಜಿತ್ ಇವರು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.