ಪೈಚಾರು :ಅಲ್ ಅಮೀನ್ ಯೂತ್ ಸೆಂಟರ್ ವತಿಯಿಂದ ಹಿಜಾಮ ಶಿಬಿರ

0

ಪೈಚಾರು ಅಲ್ ಅಮೀನ್ ಯೂತ್ ಸೆಂಟರ್ ರಿ.ಇದರ ವತಿಯಿಂದ ಸೆಪ್ಟೆಂಬರ್ 3 ರಂದು ಹಿಜಾಮ ಚಿಕಿತ್ಸಾ ಶಿಬಿರ ಕಾರ್ಯಕ್ರಮ ಪೈಚಾರು ಖುವ್ವತ್ತುಲ್ ಇಸ್ಲಾಂ ಮದರಸ ವಠಾರದಲ್ಲಿ ನಡೆಯಿತು.


ಶಿಬಿರದ ಕಾರ್ಯಕ್ರಮವನ್ನು ಸಮಿತಿಯ ಗೌರವಾಧ್ಯಕ್ಷ ಇಬ್ರಾಹಿಂ ಫೈಝಿ ದುವಾ ನೆರವೇರಿಸಿದರು. ಪೈಚಾರು ಬದ್ರಿಯಾ ಜುಮಾ ಮಸ್ಜಿದ್ ಖತೀಬರಾದ ಶಮೀರ್ ಅಹ್ಮದ್ ನಈಮಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ‘ಹಿಜಾಮಾ ಚಿಕಿತ್ಸೆ ಇಸ್ಲಾಂ ಸಂಪ್ರದಾಯದಲ್ಲಿ ಒಂದು ಪರಿಣಾಮಕಾರಿ ಚಿಕಿತ್ಸೆಯಾಗಿದೆ. ಈ ಚಿಕಿತ್ಸೆಯು ಗ್ರೀಕ್ ದೇಶದಿಂದ ಬಂದಿದ್ದು ದೇಹದಲ್ಲಿರುವ ನಾನಾ ರೀತಿಯ ಖಾಯಿಲೆಗಳಿಗೆ ಈ ಚಿಕಿತ್ಸೆಯಿಂದ ಉಂಟಾಗುವ ಯೋಜನಾ ಕಾರ್ಯಕ್ರಮ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.

ಸಮಿತಿಯ ಅಧ್ಯಕ್ಷ ಅಶ್ರಫ್ ಪೈಚಾರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಗಾಂಧಿನಗರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಅಬ್ದುಲ್ ಸಮದ್,ನ್ಯಾಯವಾದಿ ಮತ್ತು ನೋಟರಿ ಅಬೂಬಕ್ಕರ್ ಜೆ ಎನ್ ಅಡ್ಕಾರ್,ಜಾಲ್ಸೂರು ಗ್ರಾಮ ಪಂಚಾಯತ್ ಸದಸ್ಯ ಮುಜೀಬ್ ಪೈಚಾರ್ ಹಿಜಾಮ ಶಿಬಿರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಚಿಕಿತ್ಸೆಯಿಂದ ಉಂಟಾಗುವ ರೋಗನಿರೋಧಕ ಶಕ್ತಿಗಳು ಮತ್ತು ಅದರಿಂದ ಉಂಟಾಗುವ ಪ್ರಯೋಜನಗಳ ಬಗ್ಗೆ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಯುವ ಉದ್ಯಮಿ ಫೈಝಲ್ ಕಟ್ಟೆಕ್ಕಾರ್,ಸ್ಥಳೀಯ ಮದರಸ ಸದರ್ ಮೊಅಲ್ಲಿಂ ಮುಹಿಯದ್ದೀನ್ ಲತೀಫ್ ಸಕಾಫಿ, ಮಅಲ್ಲಿಂ ಹನೀಫ್ ಮದನಿ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ಶಿಬಿರದಲ್ಲಿ 50ಕ್ಕೂ ಹೆಚ್ಚು ಸ್ಥಳೀಯ ಯುವಕರು ಇದರ ಪ್ರಯೋಜನವನ್ನು ಪಡೆದುಕೊಂಡರು.
ಸಮಿತಿಯ ಉಪಾಧ್ಯಕ್ಷ ಅಬ್ದುಲ್ ಸತ್ತಾರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ,ಕಾರ್ಯದರ್ಶಿ ಸಾಲಿ ಪೈಚಾರ್ ವಂದಿಸಿದರು.