ಸುಳ್ಯದ ಸೈಂಟ್ ಬ್ರಿಜಿಡ್ಸ್ ಧರ್ಮ ಕೇಂದ್ರದಲ್ಲಿ ಸೆ. 3 ರಂದು ಡ್ರಗ್ಸ್ ವಿರೋಧ ಜಾಗೃತಿ ಅಭಿಯಾನಕ್ಕೆ ಧರ್ಮ ಕೇಂದ್ರದ ಧರ್ಮ ಗುರುಗಳಾದ ರೆ.ಫಾ. ವಿಕ್ಟರ್ ಡಿಸೋಜ ಅವರು ಚಾಲನೆ ನೀಡಿದರು.
ಮಂಗಳೂರು ಕೆಥೋಲಿಕ್ ಧರ್ಮ ಕ್ಷೇತ್ರವು ಸೆಪ್ಟೆಂಬರ್ ತಿಂಗಳನ್ನು ಡ್ರಗ್ಸ್ ವಿರೋಧ ಜಾಗೃತಿ ತಿಂಗಳು ಎಂದು ಘೋಷಿಸಿದ್ದು ಧರ್ಮ ಕ್ಷೇತ್ರದ ಎಲ್ಲಾ ಕಡೆಗಳಲ್ಲಿ ಡ್ರಗ್ಸ್ ತ್ಯಜಿಸಿ ಜೀವ ಉಳಿಸಿ ಎಂಬ ಘೋಷ ವಾಕ್ಯದಡಿ ಅಭಿಯಾನವನ್ನು ಹಮ್ಮಿಕೊಂಡಿದ್ದು ಸಮಾಜದಲ್ಲಿ ಡ್ರಗ್ಸ್ ವ್ಯಸನಿಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ವಿವಿಧ ಕಾರ್ಯಕ್ರಮಗಳಾದ ಜಾಥಾ, ಕಿರು ನಾಟಕಗಳನ್ನು ಪ್ರದರ್ಶಿಸುವ ಮೂಲಕ ಸಮಾಜಕ್ಕೆ ಹೊಸ ಸಂದೇಶವನ್ನು ಸಾರಲು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಈ ಸಂದರ್ಭದಲ್ಲಿ ಧರ್ಮ ಗುರುಗಳಾದ ರೇ.ಫಾ. ವಿಕ್ಟರ್ ಡಿಸೋಜ, ಚರ್ಚ್ ಪಾಲನಾ ಪರಿಷತ್ತಿನ ಉಪಾಧ್ಯಕ್ಷ ನವೀನ್ ಮಚಾದೊ, ಕಾರ್ಯದರ್ಶಿ ಜೂಲಿಯಾನ ಕ್ರಾಸ್ಥ, ಸಿಸ್ಟರ್ ಅಂತೋನಿಮೆರಿ, ಸಿಸ್ಟರ್ ಸಿಸಿಲಿ, ಸಿಸ್ಟರ್ ಗ್ರೇಸಿ, ಬ್ರದರ್ ಸತೀಶ್, ಎರಡು ಕಾನ್ವಂಟಿನ ಧರ್ಮ ಭಗಿನಿಯರು, ಧರ್ಮ ಕೇಂದ್ರದ 21 ಆಯೋಗಗಳ ಸಂಚಾಲಕಿ ಶ್ರೀಮತಿ ಕವಿತಾ ಡಿಸೋಜಾ. ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು ಧರ್ಮ ಕೇಂದ್ರದ ಭಕ್ತಾದಿಗಳು ಹಾಜರಿದ್ದರು.
ಈ ಸಂದರ್ಭದಲ್ಲಿ ಡ್ರಗ್ಸ್ ವಿರೋಧ ಜಾಗೃತಿ ತಿಂಗಳು ಎಂಬ ಅಭಿಯಾನದ ಕರಪತ್ರಗಳನ್ನು ಹಂಚಲಾಯಿತು.