ಅಮರ ಸಂಘಟನಾ ಸಮಿತಿ ಸುಳ್ಯ ಆಶ್ರಯದಲ್ಲಿ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ ಇವರ ಸಹಯೋಗದೊಂದಿಗೆ ಕುಕ್ಕುಜಡ್ಕದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ

0


ದ.ಕ.ಜಿ.ಪ ಹಿರಿಯ ಪ್ರಾಥಮಿಕ ಶಾಲೆ ಕುಕ್ಕುಜಡ್ಕದಲ್ಲಿ ಅಮರ ಸಂಘಟನಾ ಸಮಿತಿ ಸುಳ್ಯ ಇವರ ಆಶ್ರಯದಲ್ಲಿ ಕೆ .ವಿ.ಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ ಇವರ ಸಹಯೋಗದೊಂದಿಗೆ ಉಚಿತ ವೈದ್ಯಕೀಯ ಶಿಬಿರವನ್ನು ಸೆ. 3ರಂದು ಹಮ್ಮಿಕೊಳ್ಳಲಾಯಿತು.


ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅಕಾಡೆಮಿಕ್‌ ಆಫ್‌ ಲಿಬರಲ್‌ ಎಜುಕೇಶನ್‌ನ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯ. ಹಿಂದಿನ ಕಾಲದ ಚಿಕಿತ್ಸೆಗೂ ಈಗಿನ ಕಾಲದ ಚಿಕಿತ್ಸೆಗೆ ಭಾರಿ ವ್ಯತ್ಯಾಸವಿದೆ. ಈಗ ಹೊಸ ಹೊಸ ತಂತ್ರಜ್ಞಾನದ ಮೂಲಕ ಯಾವುದೇ ರೋಗವನ್ನೂ ಸುಲಭವಾಗಿ ಪತ್ತೆಹಚ್ಚಬಹುದು. ಸುಳ್ಯದಂತ ಗ್ರಾಮೀಣ ಭಾಗದಲ್ಲಿ ಆಸ್ಪತ್ರೆ, ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸುವಲ್ಲಿ ಕುರುಂಜಿ ವೆಂಕಟ್ರಮಣ ಗೌಡರ ಕೊಡುಗೆ ಅಪಾರ ಎಂದರು. ಸುಳ್ಯ ಅಮರ ಸಂಘಟನಾ ಸಮಿತಿಯ ಅಧ್ಯಕ್ಷ ಪ್ರವೀಣ್ ಕುಲಾಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಸುಳ್ಯ ಕಾರ್ಮಿಕ ರಾಜ್ಯ ನಿಗಮದ ವೈದ್ಯ ಡಾ.ಎಂ.ಬಿ. ಪಾರೆ, ಚೊಕ್ಕಾಡಿ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ ,ನಿಯಮಿತ ಕುಕ್ಕುಜಡ್ಕದ ಅಧ್ಯಕ್ಷರಾದ ಕೇಶವ ಗೌಡ ಕರ್ಮಜೆ, ದೊಡ್ಡತೋಟ ವಲಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ಕೃಷ್ಣಪ್ಪ ಎಂ.,ಯುವಜನ ಸಂಯುಕ್ತ ಮಂಡಳಿ ಸುಳ್ಯ ಇದರ ಪೂರ್ವಧ್ಯಕ್ಷರಾದ ಅನೀಲ್ ಪೂಜಾರಿಮನೆ, ಅಮರಮುಡ್ನೂರು ಗ್ರಾಮ ಪಂಚಾಯತ್ ಪಂಚಾಯತ್ ಅಭಿವೃದ್ದಿ ಅಧಿಕಾರಿ ದಯಾನಂದ ಪತ್ತುಕುಂಜ, ಶ್ರೀರಾಮ ಭಜನಾ ಮಂದಿರ ದೊಡ್ಡತೋಟದ ಅಧ್ಯಕ್ಷರಾದ ಮಹೇಶ್ ಮೇರ್ಕಜೆ, ಅಮರಮುಡ್ನೂರು ಗ್ರಾಮ ಪಂಚಾಯತ್ ಸದಸ್ಯ ಅಶೋಕ್ ಚೂಂತಾರು, ಚೊಕ್ಕಾಡಿ ಪ್ರಾ. ಕೃ. ಪ.ಸಂಘ ನಿ. ಕುಕ್ಕುಜಡ್ಕ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋಹನ್ ಕುಮಾರ್ ಪೊಯ್ಯೆಮಜಲು, ಅಲೆಟ್ಟಿ ಪ್ರೌಡ ಶಾಲೆ ಮುಖ್ಯ ಶಿಕ್ಷಕರಾದ ರೇವತಿ ಸಂಜಿವ ಗೌಡ ಮದುವೆಗದ್ದೆ , ದ.ಕ.ಜಿ.ಪ ಹಿರಿಯ ಪ್ರಾಥಮಿಕ ಶಾಲೆ ಎಸ್ ಡಿ ಎಂ ಸಿ ಅಧ್ಯಕ್ಷರಾದ ಮೊಹಿನಿ ಹೆಚ್ ಪದವು , ವಿಶ್ವ ಹಿಂದೂ ಪರಿಷತ್ ಸುಳ್ಯ ಪ್ರಖಂಡದ ಸೇವಾ ಪ್ರಮುಖ್ ಭಾನುಪ್ರಕಾಶ್ ಪೆಲತ್ತಡ್ಕ ,ಪ್ರಗತಿಪರ ಕೃಷಿಕ ಸುಪ್ರೀತ್ ಮೊಂಟಡ್ಕ, ಇವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೆ.ವಿ. ಜಿ ಆಸ್ಪತ್ರೆಯ ಸ್ತ್ರೀ ರೋಗ ತಜ್ಞೆ ಡಾ. ಗೀತಾ ದೊಪ್ಪ, ಡಾ. ನಿತೀನ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ್ ಪೇರಾಲು, ವೈದ್ಯಕೀಯ ವಿದ್ಯಾರ್ಥಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು. ಶಿಬಿರದಲ್ಲಿ 100 ಜನರಿಗೆ ಉಚಿತವಾಗಿ ಕನ್ನಡ್ಕ ನಿಡಲಾಯಿತು.
ಕಾರ್ಯಕ್ರಮದಲ್ಲಿ ಡಾ.ಕೆ.ವಿ ಚಿದನಾಂದ ಇವರಿಗೆ ಅಮರ ಪುರಸ್ಕಾರ ನೀಡಿ ಸಂಘಟನೆಯಿಂದ ಗೌರವಿಸಲಾಯಿತು. ಶಿಬಿರಕ್ಕೆ ಅಗಮಿಸಿದ ಡಾ.ಗೀತಾ ದೊಪ್ಪರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಅಮರಮುಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಶಾಲಾ ಮಕ್ಕಳಿಗೆ ನನ್ನ ಗ್ರಾಮ ನನ್ನ ಆರೋಗ್ಯ ಕುರಿತು ಚಿತ್ರಕಲಾ ಸ್ಪರ್ಧೆ ನಡೆಸಲಾಗಿತ್ತು. ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಪ್ರದೀಪ್ ಬೊಳ್ಳೂರು ಸ್ವಾಗತಿಸಿ, ಜಯಪ್ರಸಾದ್ ಸಂಕೇಶ ವಂದಿಸಿದರು, ಶಶಿಕಾಂತ್ ಮಿತ್ತೂರು ವಂದಿಸಿದರು. ಕಾರ್ಯಕ್ರಮದ ಯಶಸ್ವಿಗೆ ಅಮರ ಸಂಘಟನಾ ಸಮಿತಿಯ ಸದಸ್ಯರು ಸಹಕರಿಸಿದರು.