ಪಡ್ಪಿನಂಗಡಿ ಹಾಲು ಸೊಸೈಟಿ ನಿರ್ದೇಶಕ ಶಿವರಾಮ ಮಡಿವಾಳರಿಗೆ ಉತ್ತಮ ಹೈನುಗಾರು ಪ್ರಶಸ್ತಿ

0

ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ ಮಂಗಳೂರು ಇದರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಪಡ್ಪಿನಂಗಡಿ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಚಾಮೆತ್ತಡ್ಕ ಶಿವರಾಮ ಮಡಿವಾಳರವರಿಗೆ ಉತ್ತಮ ಹೈನುಗಾರ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಕಾರ್ಯಪ್ಪ ಆಕ್ರಿಕಟ್ಟೆ, ನಿರ್ದೇಶಕ ಲಕ್ಷ್ಮೀನಾರಾಯಣ ನಡ್ಕ ಉಪಸ್ಥಿತರಿದ್ದರು.